ಮೂಡುಬಿದಿರೆ : ಜಲಜೀವನ್ ಮಿಷನ್ ಯೋಜನೆ-ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿಪೂಜೆ

ಮೂಡುಬಿದಿರೆ : ಜಲಜೀವನ್ ಮಿಷನ್ ಯೋಜನೆಯಡಿ ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯ ಮುಂಡೇಲು, ಮಂಜೊಲು ಗುಡ್ಡೆ ಹಾಗೂ ಪೆಲತ್ತಡ್ಕ ಬಳಿ 94 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೀರಿನ ಟ್ಯಾಂಕ್ ಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಗುದ್ದಲಿಪೂಜೆ ನೆರವೇರಿಸಿದರು.

mudubidre


ನಂತರ ಮಾತನಾಡಿದ ಕೋಟ್ಯಾನ್ ಈ ಭಾಗದ ಮೂಲಭೂತ ಸೌಕರ್ಯವಾಗಿರುವ ಕುಡಿಯುವ ನೀರನ್ನು ಜನರಿಗೆ ಒದಗಿಸಬೇಕೆಂಬುದು ಸರಕಾರದ ಕನಸಿನ ಯೋಜನೆಯಾಗಿದೆ. ಅಲ್ಲದೆ ಈ ಭಾಗದ ಜನರ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು 3 ಟ್ಯಾಂಕ್ ಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

mudubidre

ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಪ್ರವೀಣ್ ಶೆಟ್ಟಿ, ಸದಸ್ಯರಾದ ದಿನೇಶ್ ಗೌಡ, ಸುಮಾ ಭಟ್, ಸಾರಿಕಾ, ಅಪ್ಪಿ, ಮಾಜಿ ಅಧ್ಯಕ್ಷ ಉಮಾನಾಥ ಕರ್ಕೇರಾ, ಮಾಜಿ ಸದಸ್ಯರಾದ ನಾಗರಾಜ ಕರ್ಕೇರಾ, ಜಿ.ಪಂ.ಎAಜಿನಿಯರ್ ಜಗದೀಶ್ ಶೇಟ್ ಈ ಸಂದರ್ಭದಲ್ಲಿದ್ದರು.

Related Posts

Leave a Reply

Your email address will not be published.