ಸುರತ್ಕಲ್ ಟೋಲ್ ಗೇಟ್ ಹೆಜಮಾಡಿಗೆ ಶಿಫ್ಟ್ : ಇದು ಹೋರಾಟ ಗಾರರ ಒಂದು ಹಂತದ ಜಯ : ಯು.ಟಿ.ಖಾದರ್
ಸುರತ್ಕಲ್ ಟೋಲ್ ಗೇಟ್ ರದ್ದಾಗಿಲ್ಲ ಅದು ಹೆಜಮಾಡಿಗೆ ಶಿಫ್ಟ್ ಆಗಿದೆ. ಇದು ಹೋರಾಟ ಗಾರರ ಒಂದು ಹಂತದ ಜಯ.ಈ ಹೋರಾಟ ದ ಸಂದರ್ಭದಲ್ಲಿ ಅಲ್ಲಿಗೆ ಹೋಗದೆ ಇರುವವರು ರಾಜಕೀಯ ಲಾಭದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ರು. ಈ ಕುರಿತು ಮಂಗಳೂರಲ್ಲಿ ಮಾತನಾಡಿದ ಅವರು, ಮುಂದಿನ ಸಮಸ್ಯೆ ಹೆಜಮಾಡಿ ಟೋಲ್ ಗೇಟ್ ನಲ್ಲಿ ಹೆಚ್ಚು ವರಿ ಹೊರೆ ಕಡಿತಗೊಳಿಸಲು ನಿಯಮ ರೂಪಿಸ ಬೇಕು.2014 ರಿಂದ ಎಂಟು ವರ್ಷ ಯಾರ ಅಧಿಕಾರದಲ್ಲಿದ್ದರು.ಅವರು ಟೋಲ್ ಗೇಟ್ ರದ್ದು ಪಡಿಸಲು ಏಕೆ ಸಾಧ್ಯವಾಗಿಲ್ಲ. ಬಂಟ್ವಾಳ ದಿಂದ ಸುರತ್ಕಲ್ ನಡುವೆ ಶೇ.75 ಎನ್ ಎಚ್ ಎ ಐ ಪಾಲು ಮತ್ತು ಉಳಿದ ಪಾಲು ಎನ್ ಎಂಪಿಟಿ ಪಾಲಿನ ಪ್ರಕಾರ ರಸ್ತೆ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ.ಅದರ ಪ್ರಕಾರ ಈಗ ಟೋಲ್ ಗೇಟ್ ಮಾಡುವ ಅಗತ್ಯ ವಿಲ್ಲ ,ರದ್ದು ಮಾಡಬಹುದು. ಏಕೆಂದರೆ ಇದು ಖಾಸಗಿ ಸಂಸ್ಥೆ ಗಳ ಯೋಜನೆಯಲ್ಲ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.ದೇಶಕ್ಕೆ ಕೊಡುಗೆ ನೀಡಿದವರ ಪ್ರತಿಮೆ ಸ್ಥಾಪಿಸಲು ಅವಕಾಶವಿದೆ ಈ ಹಿನ್ನಲೆಯಲ್ಲಿ ಕೆದಂಬಾಡಿ ರಾಮಯ್ಯ ಗೌಡ,ಟಿಪ್ಪು ಪ್ರತಿಮೆ ಸ್ಥಾಪನೆಗೆ ಕೆಲವರು ಪ್ರಸ್ತಾಪ ಮಾಡಿರ ಬಹುದು ಇದು ತಪ್ಪಲ್ಲ ಎಂದು ಯು.ಟಿ.ಖಾದರ್ ಹೇಳಿದರು.