Home Posts tagged #surathkal toll

ಅಕ್ರಮ ಟೋಲ್ : ಅಭಿನಂದನೆಯ ಫ್ಲೆಕ್ಸ್ ಸ್ಮಶಾನ ಪಾಲು ..

ಸುರತ್ಕಲ್‌, ನ.28: ಸುರತ್ಕಲ್‌ ಟೋಲ್‌ಗೇಟ್‌ ನ.30ರಿಂದ ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನವಾಗು ತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಸದರು ಹಾಗೂ ಶಾಸಕರಿಗೆ ಅಭಿನಂದನೆ ತಿಳಿಸುವ ಬೃಹತ್‌ ಬ್ಯಾನರ್‌ಗಳು ಸುರತ್ಕಲ್ ನ ಸ್ಮಶಾನ ಸೇರಿವೆ. ಸುರತ್ಕಲ್‌ ಹೃದಯಭಾಗದಲ್ಲಿರುವ ಸ್ಮಶಾನದ ಒಳಭಾಗದಲ್ಲಿ ಹಲವು ಬ್ಯಾನರ್‌ಗಳು ಪತ್ತೆಯಾಗಿದ್ದು, “ಸುರತ್ಕಲ್‌

3 ದಿನಗಳಲ್ಲಿ ಟೋಲ್‍ಗೇಟ್ ತೆರವು ಅಂತಿಮ ಆದೇಶ : ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಭರವಸೆ

ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ ನಡೆಯುತ್ತಿರುವ ಹಗಲು ರಾತ್ರಿ ಧರಣಿ ಒಂದು ತಿಂಗಳು ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಹಾಗೂ ಟೋಲ್ ಗೇಟ್ ತೆರವು ಆದ್ಯಾದೇಶ ಹೊರಟು ಹತ್ತು ದಿನಗಳು ದಾಟಿದರೂ ಟೋಲ್ ಸಂಗ್ರಹ ಸ್ಥಗಿತಗೊಳಿಸದಿರುವ ಕುರಿತು ಚರ್ಚಿಸಲು ದ.ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ನಿಯೋಗ ದ.ಕ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿತು. ನಿಯೋಗದ ಆಕ್ಷೇಪ, ಬೇಡಿಕೆಗಳನ್ನು ಆಲಿಸಿದ

ಟೋಲ್ ಅಳವಡಿಸಿದವರೇ ಪ್ರತಿಭಟನೆಯಲ್ಲಿ ಭಾಗಿ: ಮಂಗಳೂರಲ್ಲಿ ಶಾಸಕ ಡಾ| ವೈ.ಭರತ್ ಶೆಟ್ಟಿ ವ್ಯಂಗ್ಯ

ಸುರತ್ಕಲ್ ಟೋಲ್ ತೆರವಿಗೆ ಕೇಂದ್ರದಿಂದ ತಾಂತ್ರಿಕ ಅಂಶಗಳು ಪೂರ್ಣಗೊಂಡಿದ್ದು, 15 ದಿನದೊಳಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮೂಲಕ ಅಧಿಕೃತ ನೋಟಿಫೀಕೇಶನ್ ಆಗಲಿದೆ. ಈ ಮೂಲಕ ಶೀಘ್ರದಲ್ಲೇ ಟೋಲ್ ಸಂಗ್ರಹ ಸ್ಥಗಿತಗೊಳ್ಳಲಿದೆ ಎಂದು ಶಾಸಕ ಡಾ| ವೈ.ಭರತ್ ಶೆಟ್ಟಿ ಹೇಳಿದ್ದಾರೆ.ವಾಓ01: ಮಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 60ಕಿ.ಮೀ ವ್ಯಾಪ್ತಿಯೊಳಗೆ ಎರಡು ಟೋಲ್‍ಗಳು ಅಳವಡಿಕೆಗೆ

ಸುರತ್ಕಲ್ ಟೋಲ್ ಗೇಟ್ ಹೆಜಮಾಡಿಗೆ ಶಿಫ್ಟ್ : ಇದು ಹೋರಾಟ ಗಾರರ ಒಂದು ಹಂತದ ಜಯ : ಯು.ಟಿ.ಖಾದರ್

ಸುರತ್ಕಲ್ ಟೋಲ್ ಗೇಟ್ ರದ್ದಾಗಿಲ್ಲ ಅದು ಹೆಜಮಾಡಿಗೆ ಶಿಫ್ಟ್ ಆಗಿದೆ. ಇದು ಹೋರಾಟ ಗಾರರ ಒಂದು ಹಂತದ ಜಯ.ಈ ಹೋರಾಟ ದ ಸಂದರ್ಭದಲ್ಲಿ ಅಲ್ಲಿಗೆ ಹೋಗದೆ ಇರುವವರು ರಾಜಕೀಯ ಲಾಭದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ರು. ಈ ಕುರಿತು ಮಂಗಳೂರಲ್ಲಿ ಮಾತನಾಡಿದ ಅವರು, ಮುಂದಿನ ಸಮಸ್ಯೆ ಹೆಜಮಾಡಿ ಟೋಲ್ ಗೇಟ್ ನಲ್ಲಿ ಹೆಚ್ಚು ವರಿ ಹೊರೆ ಕಡಿತಗೊಳಿಸಲು ನಿಯಮ ರೂಪಿಸ ಬೇಕು.2014 ರಿಂದ ಎಂಟು ವರ್ಷ ಯಾರ ಅಧಿಕಾರದಲ್ಲಿದ್ದರು.ಅವರು ಟೋಲ್ ಗೇಟ್

ಸುರತ್ಕಲ್ ಟೋಲ್ ಗೇಟ್ ಪಾಸ್ಟ್ ಟ್ಯಾಗ್‍ನಲ್ಲಿ ನಗದು ಕಟ್ಟ್ : ಕಾರು ಮಾಲಿಕರಿಂದ ದೂರು

ಸುರತ್ಕಲ್ ಟೋಲ್ ಗೇಟಲ್ಲಿ ವಾಹನ ಪಾಸ್ ಆಗದಿದ್ದರೂ, ಪಾಸ್ಟ್ ಟ್ಯಾಗ್ ಮೂಲಕ ಹಣ ವಸೂಲಿ ನಡೆದ ಬಗ್ಗೆ ಕಾರು ಮಾಲಿಕರು ಪೊಲೀಸ್ ದೂರು ನೀಡಿದ್ದಾರೆ. ಕಾಪು ತಾಲೂಕಿನ ಎಲ್ಲೂರು ನಿವಾಸಿ ಲಕ್ಷ್ಮಣ್ ಎಂಬವರೇ ಟೋಲ್ ಗೇಟ್ ನ ವಂಚನೆಗೆ ಒಳಗಾದವರು, ಇವರು ಎಲ್ಲೂರಿನ ಐಟಿಐ ಉದ್ಯೋಗಿ, ಸೋಮವಾರ ಉಚ್ಚಿಲ ಹೊರತು ಪಡಿಸಿ ಕಾರಿನಲ್ಲಿ ಎಲ್ಲೂ ಪ್ರಯಾಣಿಸಿಲ್ಲ, ಆದರೆ ರಾತ್ರಿ ಏಳರ ಸುಮಾರಿಗೆ ಮೊಬೈಲ್ ಗೆ ಮ್ಯಾಸೇಜ್ ವೊಂದು ಬಂದಿದ್ದು, ಸುರತ್ಕಲ್ ಟೋಲ್ ಗೇಟ್ ನಲ್ಲಿ ಪಾಸ್ಟ್ ಟ್ಯಾಗ್

ಕೊನೆಗೂ ‘ಸುರತ್ಕಲ್ ಟೋಲ್‌ಗೇಟ್’ ರದ್ದು

ಹೋರಾಟಗಾರರ ನಿರಂತರ ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರವು, ಕೊನೆಗೂ ಮಂಗಳೂರಿನ ಸುರತ್ಕಲ್  ಟೋಲ್ ಸಂಗ್ರಹ ಕೇಂದ್ರವನ್ನು ರದ್ದು ಮಾಡಿದೆ. ಈ ಸಂಬಂಧ ಟ್ವಿಟರ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ಹಂಚಿಕೊಂಡಿದ್ದು, “ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕರ

ಸುರತ್ಕಲ್‌ ಟೋಲ್‌ಗೇಟ್‌ ತೆರವುಗೊಳಿಸಲು ಸಾಧ್ಯವಾಗದ ಸಂಸದರು ಜನಪ್ರತಿನಿಧಿಯಾಗಲು ಅರ್ಹರಲ್ಲ: ಐವನ್‌ ಡಿಸೋಜಾ

ಸುರತ್ಕಲ್, ನ.೮: ದೇಶದಲ್ಲಿ ೩೬ ಅಕ್ರಮ ಟೋಲ್‌ಗೇಟ್‌ಗಳಿರುವುದನ್ನು ಒಪ್ಪಿಕೊಂಡಿರುವ ಕೇಂದ್ರ ಹೆದ್ದಾರಿ ಸಚಿವ ಗಡ್ಕರಿಯವರೇ ತೆರವುಗೊಳಿಸಲಾಗುವುದು ಎಂದು ಲೋಕಸಭೆಯಲಿ ಹೇಳಿದ ಬಳಿಕವೂ ಸಂಸದರಾಗಿ ಸುರತ್ಕಲ್ ಅಕ್ರಮ ಟೋಲ್‌ಗೇಟ್ ತೆರವುಗೊಳಿಸಲು ಸಾಧ್ಯವಾಗದಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಜನಪ್ರತಿನಿಧಿಯಾಗಿರಲು ಅರ್ಹರಲ್ಲ ಎಂದು ಐವನ್ ಡಿಸೋಜಾ ಹೇಳಿದರು.ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಆಗ್ರಹಿಸಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ

ಮಾತು ಉಳಿಸಲಾಗದ ಸಂಸದ ಅಜ್ಞಾತ ವಾಸಕ್ಕೆ : ಮುನೀರ್ ಕಾಟಿಪಳ್ಳ

ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಈವರೆಗೆ ನೀಡಿದ ಭರವಸೆಗಳು ಯಾವುದೂ ಈಡೇರಿಲ್ಲ. ಒಂದು ರೂಪಾಯಿಗೆ 16 ಡಾಲರ್ ಒದಗಿಸುವ , ಎರಡು ಸಾವಿರಕ್ಕೆ ಒಂದು ಲೋಡು ಮರಳು ಒದಗಿಸುವ, ಜಿಲ್ಲೆಯ ಜನರಿಗೆ ಎಮ್ ಆರ್ ಪಿ ಎಲ್, ಎಸ್ಇಝಡ್ ಮುಂತಾದ ಉದ್ಯಮಗಳಲ್ಲಿ ಕಡ್ಡಾಯ ಉದ್ಯೋಗ ಒದಗಿಸುವ ಮಾತುಗಳಲ್ಲಿ ಒಂದನ್ನೂ ಈಡೇರಿಸಲಾಗದಿದ್ದರು ಯಾವುದೇ ಆತಂಕವಿಲ್ಲದೆ ಜಿಲ್ಲೆಯ ಜನರ ಮುಂದೆ ನಿರ್ಭೀತಿಯಿಂದ ಎದೆಗೊಟ್ಟು ತಿರುಗಾಡುತ್ತಿದ್ದರು. ಇದೇ ಪ್ರಥಮ ಬಾರಿಗೆ ಟೋಲ್ ಗೇಟ್ ವಿರುದ್ಧದ

ಸುರತ್ಕಲ್ ಅಕ್ರಮ ಟೋಲ್‍ಗೇಟ್ ವಿರುದ್ಧ ಹಗಲು-ರಾತ್ರಿ ಧರಣಿ : ಸಾಥ್ ನೀಡಿದ ಅಭಯಚಂದ್ರ ಜೈನ್

ಸುರತ್ಕಲ್ ಟೋಲ್ ಗೇಟ್ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ಹಮ್ಮಿಕೊಂಡಿರುವ ಆಹೋರಾತ್ರಿ ಧರಣಿಯ ಪ್ರಥಮ ದಿನದ ರಾತ್ರಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಹೋರಾಟಗಾರರಿಗೆ ಸಾಥ್ ನೀಡಿದರು. ಧರಣಿಯ ಸ್ಥಳಕ್ಕೆ ರಾತ್ರಿ 9 ಗಂಡೆಗೆ ಬಂದ ಜೈನ್ ಅವರು, ಒಂದು ಚಾಪೆ ಹಾಗೂ ಸೊಳ್ಳೆಗಳಿಂದ ರಕ್ಷಣೆಗೆ ಒಂದು ಹೊದಿಕೆಯೊಂದಿಗೆ ಬಂದಿರುವುದು ವಿಶೇಷವಾಗಿತ್ತು. ಈ ವೇಳೆ ಮಾತನಾಡಿದ ಅವರು, ಸಂಸದರು ನೀಡಿರುವ ಗಡುವು ಇಂದಿನಿಂದ 10 ದಿನಗಳ ಕಾಲ ಇದೆ. ಆದ್ದರಿಂದ ಅಷ್ಟು

ಪ್ರತಿಭಾ ಕುಳಾಯಿಯವರ ವಿರುದ್ಧದ ಮಾನಹಾನಿ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಮನವಿ

ಪುತ್ತೂರು : ಸುರತ್ಕಲ್ ಟೋಲ್‌ಗೇಟ್ ತೆರವು ಹೊರಾಟದಲ್ಲಿ ಮುಂಚೂಣಿಯಲ್ಲಿದ್ದ ಸುರತ್ಕಲ್‌ನ ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕುಳಾಯಿರವರನ್ನು ಪೊಲೀಸರು ವಶಕ್ಕೆ ಪಡೆಯುವ ಸಂದರ್ಭದ ವೀಡಿಯೋ, ಫೋಟೋಗಳ ಮಾಧ್ಯಮ ತುಣುಕುಗಳನ್ನು ಪೇಸ್‌ಬುಕ್‌ನಲ್ಲಿ ಶ್ಯಾಮ ಸುದರ್ಶನ ಭಟ್ ಎಂಬವರು ಲೈಂಗಿಕ ಸಂಜೆಗಳ ಭಾಷೆಯನ್ನು ಬಳಸಿ ಪ್ರತಿಭಾ ಕುಳಾಯಿಯವರನ್ನು ನಿಂದಿಸಿದ್ದಾರೆ. ಲೈಂಗಿಕ ಕಿರುಕುಳಕ್ಕೆ ಸಮಾನವಾಗಿರುವ ಈ ರೀತಿಯ ಬಹಿರಂಗ ದಾಳಿ ಮಹಿಳಾ ಸಮುದಾಯಕ್ಕೆ ಮಾಡಿದ