ಟೋಲ್ ಅಳವಡಿಸಿದವರೇ ಪ್ರತಿಭಟನೆಯಲ್ಲಿ ಭಾಗಿ: ಮಂಗಳೂರಲ್ಲಿ ಶಾಸಕ ಡಾ| ವೈ.ಭರತ್ ಶೆಟ್ಟಿ ವ್ಯಂಗ್ಯ

ಸುರತ್ಕಲ್ ಟೋಲ್ ತೆರವಿಗೆ ಕೇಂದ್ರದಿಂದ ತಾಂತ್ರಿಕ ಅಂಶಗಳು ಪೂರ್ಣಗೊಂಡಿದ್ದು, 15 ದಿನದೊಳಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮೂಲಕ ಅಧಿಕೃತ ನೋಟಿಫೀಕೇಶನ್ ಆಗಲಿದೆ. ಈ ಮೂಲಕ ಶೀಘ್ರದಲ್ಲೇ ಟೋಲ್ ಸಂಗ್ರಹ ಸ್ಥಗಿತಗೊಳ್ಳಲಿದೆ ಎಂದು ಶಾಸಕ ಡಾ| ವೈ.ಭರತ್ ಶೆಟ್ಟಿ ಹೇಳಿದ್ದಾರೆ.
ವಾಓ01: ಮಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 60ಕಿ.ಮೀ ವ್ಯಾಪ್ತಿಯೊಳಗೆ ಎರಡು ಟೋಲ್‍ಗಳು ಅಳವಡಿಕೆಗೆ ಅವಕಾಶವಿಲ್ಲ ಎಂದು ಹೇಳಿಕೆ ನೀಡಿದ ಕೂಡಲೇ ಪೆಬ್ರವರಿಯಿಂದ ಸುರತ್ಕಲ್ ಟೋಲ್ ತೆರವಿಗೆ ಸಂಸದರು, ನಾವು ಸೇರಿ ಮಾಡಿದ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ಟೋಲ್‍ಗೇಟ್ ಮಾತ್ರವಲ್ಲದೆ ಅವೈಜ್ಞಾನಿಕ ಫ್ಲೈಓವರ್ ಬಗ್ಗೆನೂ ಉಲ್ಲೇಖ ಮಾಡಿದ್ದೆ. ಅದರ ಪ್ರಯತ್ನ ಈಗ ಫಲ ನೀಡಿದ್ದು, ನೋಟಿಫಿಕೇಶನ್ ಆಗಿ ರಾಜ್ಯ ಸರ್ಕಾರಕ್ಕೆ ಬಂದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ತಲುಪಿದೆ. ಜಿಲ್ಲಾಧಿಕಾರಿಗಳು ಟೋಲ್ ವಿಲೀನದ ಬಗ್ಗೆ ಮತ್ತೊಂದು ನೋಟಿಫಿಕೇಶನ್ ಹೊರಡಿಸಲಿದ್ದಾರೆ. ಜಿಲ್ಲಾಧಿಕಾರಿಗಳ ನೋಟಿಫಿಕೇಶನ್ ಆದ ಬಳಿಕ ಟೋಲ್ ಸಂಗ್ರಹ ಸಂಪೂರ್ಣಸ್ಥಗಿತವಾಗಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಮಂಗಳೂರು ಮೇಯರ್ ಜಯಾನಂದ ಅಂಚನ್, ಬಿಜೆಪಿ ಉತ್ತರ ವಲಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಮಹೇಶ್ ಮೂರ್ತಿ ಸುರತ್ಕಲ್ , ವಿಠಲ ಸಾಲಿಯಾನ್, ಮಂಗಳೂರು ಉತ್ತರ ಯುವ ಮೋರ್ಚಾ ಅಧ್ಯಕ್ಷ ಭರತ್ ಕೃಷ್ಣಾಪುರ, ಗುರುಚರಣ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.