ಹಾಲಿನ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತೆ : ಯು.ಟಿ. ಖಾದರ್

ಹಾಲಿನ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆಯುವ ತೀರ್ಮಾ ನ ಆದುದರಿಂದ ಈ ತೀರ್ಮಾನ ವನ್ನು ಕೆಎಂ ಎಫ್ ಕೈ ಬಿಡಬೇಕು ಮತ್ತು ಸರಕಾರ ಈ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಶಾಸಕ ಹಾಗೂ ವಿಧಾ ನಸಭಾ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಹೇಳಿದ್ರು. ಈ ಕುರಿತು ಮಂಗಳೂರಿನ ಸಕ್ರ್ಯೂಟ್‍ಹೌಸ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಹಾಲಿನ ದರ ಹೆಚ್ಚಳ ಕ್ಕೆ ಕಾಂಗ್ರೆಸ್‍ನ ವಿರೋಧ ವಿದೆ.ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಹೈನುಗಾರರಿಗೆ ಮತ್ತು ಗ್ರಾಹಕರಿಗೆ ಸಹಾಯ ಆಗುವ ರೀತಿಯಲ್ಲಿ ಹಾಲಿನ ದರ ನಿಗದಿ ಪಡಿಸಿತ್ತು.ಹಾಲು ಅಗತ್ಯ ವಸ್ತು ಆದುದರಿಂದ ಈ ಸಂದರ್ಭದಲ್ಲಿ ಬೆಲೆ ಏರಿಕೆ ಸರಿಯಲ್ಲ ಎಂದು ಅವರು ಹೇಳಿದರು. ಇನ್ನು ಮತದಾರರ ಪಟ್ಟಿ ಗೆ ಹೆಸರು ಸೇರಿಸಲು ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.ಆದರೆ ತಳ ಮಟ್ಟದ ಅಧಿಕಾರಿಗಳು ಈ ಸೂಚನೆ ಪಾಲಿಸುತ್ತಿಲ್ಲ.ಆರು ತಿಂಗಳು ಒಂದು ಕಡೆ ವಾಸ ಮಾಡುವ ನಿಗದಿತ ವಯೋಮಾನದ ವ್ಯಕ್ತಿಗೆ ಚುನಾವಣಾ ಪಟ್ಟಿಯಲ್ಲಿ ಸೇರ್ಪಡೆ ಮಾಡಬಹುದು.ಮುಂದೆ ಇದೇ ರೀತಿ ಆಧಾರ್ ಕಡ್ಡಾಯ ಎಂದು ಬಲವಂತ ಮಾಡಿದರೆ ಈ ಬಗ್ಗೆ ದೂರು ದಾಖಲಿ ಸಲಾಗುವುದು ಎಂದು ಯು.ಟಿ.ಖಾದರ್ ಹೇಳಿದ್ರು . ಸುದ್ದಿಗೋಷ್ಠಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಮುಖಂಡರಾದ ಮಮತಾ ಗಟ್ಟಿ ,ಕಾಂಗ್ರೆಸ್ ಮೋಹನ್ ಶೆಟ್ಟಿ ಮೊದಲಾದ ವರು ಉಪಸ್ಥಿತ ರಿದ್ದರು.

Related Posts

Leave a Reply

Your email address will not be published.