Home Posts tagged #belthangadi (Page 6)

ನೆಲ್ಯಾಡಿ: ಬೈಕ್ ಮತ್ತು ಕಾರುಗಳ ಮಧ್ಯೆ ಅಪಘಾತ – ಗಂಭೀರ ಗಾಯಗೊಂಡ ಬೈಕ್ ಸವಾರ ತಾ.ಪಂ ಮಾಜಿ ಸದಸ್ಯ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಮಧ್ಯೆ ನೆಲ್ಯಾಡಿ ಎಚ್‍ಪಿ ಪೆಟ್ರೋಲ್ ಬಂಕ್ ನ ಬಳಿ ಆಲ್ಟೊ ಕಾರು ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ತಾಲೂಕು ಪಂಚಾಯತ್ ಮಾಜಿ ಸದಸ್ಯ ಲಕ್ಷ್ಮೀನಾರಾಯಣ ಎಂದು ಗುರುತಿಸಲಾಗಿದ್ದು, ಅಪಘಾತದಲ್ಲಿ ಕಾಲಿಗೆ ತೀವ್ರವಾದ ಗಾಯವಾಗಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ನೆಲ್ಯಾಡಿಯಿಂದ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ, ಪೂಜೆ ಸಲ್ಲಿಕೆ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪೂರ ಅವರು ಭೇಟಿ ನೀಡಿದರು. ಶ್ರೀ ಮಂಜುನಾಥ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಶ್ರಾವಣ ಮಾಸದ ಶುಭ ಸೋಮವಾರದಂದು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ಶ್ರೀ ಮಂಜುನಾಥ ದೇವರು ರಾಜ್ಯದ ಜನರಿಗೆ ಸುಭೀಕ್ಷೆಯನ್ನು ತರಲಿ ಎಂದರು.

ನೆಲ್ಯಾಡಿ: ಪಡುಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ವಾಲಿಬಾಲ್ ಪಂದ್ಯಾಟ

ನೆಲ್ಯಾಡಿ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಸರಕಾರಿ ಪ್ರೌಢಶಾಲೆ ಪಡುಬೆಟ್ಟು ನೆಲ್ಯಾಡಿ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ ಹಾಗೂ ಬಾಲಕಿಯರ ವಾಲಿಬಾಲ್ ಪಂದ್ಯಾಟ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಯಾಕೂಬ್ ಯು.,ಯಾನೆ ಸಲಾಂ ಬಿಲಾಲ್ ಉದ್ಘಾಟಿಸಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಟಿ.ಕ್ರೀಡಾಂಗಣ ಉದ್ಘಾಟಿಸಿದರು.

ಬೆಳ್ತಂಗಡಿ: ಪಟ್ರಮೆ ಮೀಸಲು ಅರಣ್ಯದಲ್ಲಿ ಕಡವೆ ಬೇಟೆ- ಮೂವರು ಆರೋಪಿಗಳ ಬಂಧನ

ಬೆಳ್ತಂಗಡಿ: ಪಟ್ರಮೆ ಗ್ರಾಮದ ದಡಂತಮಲೆ ಮೀಸಲು ಅರಣ್ಯದಲ್ಲಿ ಕಡವೆ ಬೇಟೆಯಾಡಿದ ಮೂವರನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಬಂಧಿಸಿದ್ದು ಓರ್ವ ಆರೋಪಿ ಪರಾರಿಯಾಗಿದ್ದಾನೆ. ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಸಂಕೇಶ ನಿವಾಸಿ ಕೊಟ್ಯಪ್ಪ ಗೌಡ, ಪುನೀತ್ ಮಣಿಯೇರು, ಎಸ್.ಜೆ.ಸುದೇಶ ಸಂಕೇಶ ಬಂಧಿತ ಆರೋಪಿಗಳು. ಲೋಕೇಶ್ ಸಂಕೇಶ ಎಂಬಾತ ಕಾಡಿನಲ್ಲಿ ಪರಾರಿಯಾಗಿದ್ದು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳಿಂದ ಕಡವೆಯ ಮೃತ ದೇಹ ಮತ್ತು

ಕೌಕ್ರಾಡಿ ಗ್ರಾಮದ ಮೂಲಕ ನೆಲ್ಯಾಡಿ ಪೇಟೆಯನ್ನು ಸಂಪರ್ಕಿಸುವ ಪುತ್ಯೆ ರಸ್ತೆಗಿಲ್ಲವೇ ದುರಸ್ತಿ ಭಾಗ್ಯ?

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಿಂದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮೂಲಕ ನೆಲ್ಯಾಡಿ ಪೇಟೆಯನ್ನು ಸಂಪರ್ಕಿಸುವ ಪುತ್ಯೆ ಪ್ರದೇಶದ 800 ಮೀಟರ್ ರಸ್ತೆಗೆ ಡಾಂಬರು ಅಥವಾ ಕಾಂಕ್ರೀಟ್ ಕಾಣದೆ ದಶಕಗಳ ಕಾಲವೇ ಸಂದಿದ್ದು ಸಂಚಾರಕ್ಕೆ ಆಯೋಗ್ಯವಾಗಿದೆ. ದಿನಂಪ್ರತಿ ನೂರಾರು ನೌಕರರು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಶ್ರೀ ಕ್ಷೇತ್ರ ಕೊಕ್ಕಡ, ಸೌತಡ್ಕ, ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಪ್ರಯಾಣಿಸುವ ಭಕ್ತರೂ ಕೂಡ ಈ ರಸ್ತೆ ಮೂಲಕವೇ ಪ್ರಯಾಣಿಸುತ್ತಿದ್ದಾರೆ. ಆದರೆ

ಕೌಕ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಲೋಕೇಶ್ ಬಾಣಜಾಲು, ಉಪಾಧ್ಯಕ್ಷರಾಗಿ ವನಿತಾ ಎಂ.ಆಯ್ಕೆ

ನೆಲ್ಯಾಡಿ: ಕೌಕ್ರಾಡಿ ಗ್ರಾ.ಪಂ.ನ 2ನೇ ಅವಧಿಗೆ ಅಧ್ಯಕ್ಷರಾಗಿ ಲೋಕೇಶ್ ಬಾಣಜಾಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವನಿತಾ ಎಂ.ಆಯ್ಕೆಯಾಗಿದ್ದಾರೆ. ಇಬ್ಬರೂ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ.

ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ

ಉಜಿರೆ, ದಿ.19 : ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗ ಹಾಗೂ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇದರ ಸಹಯೋಗದೊಂದಿಗೆ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ‘ಪ್ರೇರಣಾ ದಿನ’ ಎಂಬ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶ್ರೀ ಸಿದ್ಧವನ ಗುರುಕುಲದಲ್ಲಿ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಜೀವಮಾನ ಸಾಧನೆಗಾಗಿ ಉಜಿರೆ ಶ್ರೀಧಮ ಕಾಲೇಜಿನ

ಸವಣೂರು : ತೆಂಗಿನಕಾಯಿ ಕೀಳುವಾಗ ತೆಂಗಿನ ಮರದಿಂದ ಬಿದ್ದು ಮಹಿಳೆ ಮೃತ್ಯು

ಸವಣೂರು : ತೆಂಗಿನ ಮರ ಹತ್ತಿ ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದ ಸುಚಿತ್ರ (30) ರವರು ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದಲ್ಲಿ ನಡೆದಿದೆ.ಪ್ರಮೋದ್ ಬೊಳ್ಳಾಜೆಯವರ ಪತ್ನಿಯಾಗಿದ್ದ ಸುಚಿತ್ರ ರವರು ತೆಂಗಿನ ಮರ ಹತ್ತಿ ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದರು.ಸುಚಿತ್ರ ರವರ ಈ ಕಾಯಕಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿತ್ತು.ಮೃತರು ಪತಿ,

ಧರ್ಮಸ್ಥಳದಲ್ಲಿ ನೈತಿಕ ಪೊಲೀಸ್ ಗಿರಿ – ಆಟೋ ರಿಕ್ಷಾ ಚಾಲಕನ ಮೇಲೆ ತಂಡದಿಂದ ಹಲ್ಲೆ

ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಾಡಿಗೆಗೆ ಹೋಗಿದ್ದ ಉಜಿರೆಯ ಆಟೋ ರಿಕ್ಷಾ ಚಾಲಕನಿಗೆ ತಂಡವೊಂದು ತೀವ್ರ ಹಲ್ಲೆ ನಡೆಸಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಉಜಿರ ಹಳೆ ಪೇಟೆ ನಿವಾಸಿ ಮುಹಮ್ಮದ್ ಆಶಿಕ್ ಹಲ್ಲೆಗೊಳಗಾದ ಯುವಕ. ಆಶಿಕ್ ತನ್ನ ಆಟೋದಲ್ಲಿ ಬುಧವಾರ ರಾತ್ರಿ ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಾಡಿಗೆ ಹೋಗಿ ಹಿಂದಿರುಗುತ್ತಿದ್ದ ವೇಳೆ ಈ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ನಾಲ್ವರ ತಂಡವೊಂದು ಧರ್ಮಸ್ಥಳ ಕೆಎಸ್ಸಾರ್ಟಿಸಿ

ಚಾರ್ಮಾಡಿ ಘಾಟಿ : ಜಲಪಾತ ವೀಕ್ಷಿಸುತ್ತಿರುವ ಮಂದಿ, ವಾಹನ ಸಂಚಾರಕ್ಕೆ ತೊಡಕು

ಚಾರ್ಮಾಡಿ ಘಾಟಿ ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ಹಗಲಲ್ಲೂ ದಟ್ಟ ಮಂಜಿನ ವಾತಾವರಣ ಕಂಡುಬರುತ್ತಿದ್ದು, ವಾಹನ ಸವಾರರು ಪರದಾಟ ನಡೆಸುತ್ತಾ ಚಾಲನೆ ಮಾಡಬೇಕಾದ ಪರಿಸ್ಥಿತಿ ಇದೆ. ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಸುರಿದಿದ್ದು, ಪ್ರಸ್ತುತ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಈ ಸಮಯ ಘಾಟಿಯಲ್ಲಿ ದಟ್ಟವಾದ ಮಂಜಿನ ವಾತಾವರಣ ಏರ್ಪಟ್ಟು ವಾಹನಗಳ ಹೆಡ್ಲೈಟ್ ಹಾಕಿದರೂ ದಾರಿ ಕಾಣದ ಸ್ಥಿತಿ ಉಂಟಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಇನ್ನಷ್ಟು ದಟ್ಟ ಮಂಜಿನಿಂದ ದಾರಿ