ನೆಲ್ಯಾಡಿ: ಅನಾರೋಗ್ಯ ಪೀಡಿತ ಮಹಿಳೆಯೋರ್ವರ ಮನೆ ತನಕ 108 ಅಂಬ್ಯುಲೆನ್ಸ್ ಸಂಚರಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ 108 ಸಿಬ್ಬಂದಿಗಳು ಸುಮಾರು 1 ಕಿ.ಮೀ.ದೂರದ ತನಕ ಮಹಿಳೆಯನ್ನು ಸ್ಟ್ರೇಚರ್ ನಲ್ಲಿ ಹೊತ್ತುಕೊಂಡೇ ಬಂದು ತುರ್ತು ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿರುವ ಮಾನವೀಯ ಘಟನೆ ಶಿರಾಡಿ ಗ್ರಾಮದಲ್ಲಿ ನಡೆದಿದೆ. ಶಿರಾಡಿ ಗ್ರಾಮದ ಪದಂಬಳ ಸಮೀಪದ ದೇವರಮಾರು
ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಧರ್ಮಸ್ಥಳದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ದ್ರವ ಸಾರ ಜನಕ ಜಾಡಿಗಳ ವಿತರಣಾ ಕಾರ್ಯಕ್ರಮ ಧರ್ಮಸ್ಥಳ ಪ್ರವಚನ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಧರ್ಮಸ್ಥಳದ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು, ಪ್ರಸಕ್ತ ಪರಿಸ್ಥಿತಿಯಲ್ಲಿ ದಕ್ಷಿಣ ಕನ್ನಡದಲ್ಲಿ ಹಾಲಿನ ಉತ್ಪಾದನೆಯಲ್ಲಿ ಹೆಚ್ಚಿಸಿ ಕೊಳ್ಳಬೇಕಾದ ಅನಿವಾರ್ಯತೆಯಿದೆ.
ಶಿಶಿಲ: ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಮಿಯ್ಯಾರು ರಕ್ಷಿತಾರಣ್ಯದ ಹೇವಾಜೆಯಲ್ಲಿ ಅಕ್ರಮವಾಗಿ ಮರ ಕಡಿದು ದಾಸ್ತಾನು ಮಾಡುತ್ತಿದ್ದಾಗ ಉಪ್ಪಿನಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಶಿಶಿಲ ಗ್ರಾಮದ ದೇವಸ ನಿವಾಸಿ ಸೇಸಪ್ಪ ಗೌಡರ ಮಗ ಧರ್ಣಪ್ಪ ಗೌಡ(46) ಎಂಬವರನ್ನು ಬಂಧಿಸಿದ್ದು. ಮತ್ತೊರ್ವ ಆರೋಪಿ ಹೇವಾಜೆ ನಿವಾಸಿ ಅಜಿತ್ ಪರಾರಿಯಾಗಿದ್ದಾನೆ. ಸ್ಥಳದಲ್ಲಿ ಒಂದು ಕಟ್ಟಿಂಗ್ ಮೀಷಿನ್,
ನೆಲ್ಯಾಡಿ: ಅರಣ್ಯ ಇಲಾಖೆ ವತಿಯಿಂದ ಇಚ್ಲಂಪಾಡಿ ಗ್ರಾಮದ ಸೈಂಟ್ ಜಾರ್ಜ್ ಅರ್ಥೋಡಾಕ್ಸ್ ಸೀರಿಯನ್ ಚರ್ಚ್‍ನಲ್ಲಿ ನಾಗರಿಕರಿಗೆ ಕಾಡಾನೆಗಳು ತೋಟಕ್ಕೆ ಬರದಂತೆ ತಡೆಗಟ್ಟುವ ಹಾಗೂ ಬಂದರೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡಲಾಯಿತು. ಅಂತಾರಾಷ್ಟ್ರೀಯ ಮಟ್ಟದ ತಜ್ಞರಾದ ಡಾ.ರುದ್ರಾಧಿತ್ಯ ವಿಕ್ರಂ ಷಾ ರವರು ಮಾಹಿತಿಯನ್ನು ನೀಡಿದರು. ಕಾರ್ಯಾಗಾರದಲ್ಲಿ ಇಚಿಲಂಪಾಡಿ ಚರ್ಚಿನ ಧರ್ಮಗುರುಗಳು, ಗ್ರಾಮ ಪಂಚಾಯತ್ ಸದಸ್ಯರಾದ ಡೈಸಿ
ಪಟ್ರಮೆ: ಬೆಳ್ತಂಗಡಿ ತಾಲೂಕಿನ ಪಟ್ರಮೆ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಹೊಳೆ ಬದಿಗೆ ಬಿದ್ದ ಘಟನೆ ಸೆ.5 ರಂದು ಬೆಳಿಗ್ಗೆ ನಡೆದಿದೆ. ಧರ್ಮಸ್ಥಳದಿಂದ ಕೊಕ್ಕಡದ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೊಳೆಯ ಬದಿಗೆ ಬಿದ್ದಿದೆ ಎನ್ನಲಾಗಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾವಣಗೆರೆಯ ಕಾರಾಗಿದ್ದು, ಕಾರಿನಲ್ಲಿ ಚಾಲಕ ಮಾತ್ರ ವಿದ್ದು, ಈತ ವಿಪರೀತ ಮದ್ಯಪಾನ ಸೇವಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ನೆಲ್ಯಾಡಿ : ರಕ್ಷಿತಾರಣ್ಯದಿಂದ ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ನೇತೃತ್ವದ ತಂಡ ಪತ್ತೆ ಹಚ್ಚಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಲಾರಿ ಸಹಿತ ಸೊತ್ತು ವಶಲಾರಿಯೊಂದರಲ್ಲಿ ಹೆಬ್ಬಲಸು, ನಂದಿ, ಬಣ್ಪು, ಸೇರಿದಂತೆ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖಾಧಿಕಾರಿಗಳು ಸುಬ್ರಹ್ಮಣ್ಯ ಕ್ರಾಸ್ ಬಳಿ ತಪಾಸಣೆ ನಡೆಸಿ ಮರಮಟ್ಟುಗಳನ್ನು
ಬೆಳ್ತಂಗಡಿಯ ಪುದುವೆಟ್ಟುನಲ್ಲಿ ಗುರುವಾರ ಕಬಡ್ಡಿ ಆಟಗಾರ, 24ರ ಹರೆಯದ ಸ್ವರಾಜ್ ಆತ್ಮಹತ್ಯೆ ಮಾಡಿಕೊಳ್ಳಲು ಲೋನ್ ಆ್ಯಪ್ ಕಿರುಕುಳವೇ ಕಾರಣ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರ, ಉಜಿರೆಯ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಸ್ವರಾಜ್ ನಿನ್ನೆ ಬೆಳ್ತಂಗಡಿಯ ಪುದುವೆಟ್ಟುವಿನಲ್ಲಿರುವ ತನ್ನ ಮನೆಯ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದ. ಇದೀಗ ಆತ ಲೋನ್ ಆ್ಯಪ್ ಮೂಲಕ ಪಡೆದ ಸಾಲವೇ ಸಾವಿಗೆ
ಬೆಳ್ತಂಗಡಿ: ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿಯ ಪುದುವೆಟ್ಟು ಎಂಬಲ್ಲಿ ನಡೆದಿದೆ.ಪುದುವೆಟ್ಟು ಕುಬಲ ನಿವಾಸಿ ಸ್ವರಾಜ್ (24 ) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ. ಸ್ವರಾಜ್ ಪ್ರಸುತ್ತ ಧರ್ಮಸ್ಥಳದಲ್ಲಿ ವಾಸವಾಗಿದ್ದು, ಇಂದು ಪುದುವೆಟ್ಟುವಿನಲ್ಲಿದ್ದ ಅವರ ಹಳೆಮನೆಯ ಸ್ನಾನಗೃಹದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅತ್ಯುತ್ತಮ ಕಬಡ್ಡಿ ಆಟಗಾರರಾಗಿದ್ದ ಇವರು ಉಜಿರೆಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ
ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಬೇಕು. ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಯಲ್ಲಿ ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿ ಮಾಡುತ್ತಿದೆ ಎಂದು ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪೂರ ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭ ಕಾರ್ಯಕರ್ತರನ್ನು ಉದ್ದೇಶಸಿ ಮಾತನಾಡಿದರು. ಬಳಿಕ ಸಚಿವರು ಕಾರ್ಯಕರ್ತರ ಅಹವಾಲು ಸ್ವೀಕರಿಸಿದರು.
ಧರ್ಮಸ್ಥಳದ ನೇತ್ರಾವತಿ ನದಿಯ ತೀರದಲ್ಲಿ ಅನಾಥ ಶವ ಪತ್ತೆಯಾದ ಘಟನೆ ನಡೆದಿದೆ. ಸ್ಥಳೀಯ ವ್ಯಕ್ತಿಯೊಬ್ಬರು ನದಿಯಲ್ಲಿ ಮೃತದೇಹ ಕಂಡು ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಸದಸ್ಯರಿಗೆ ಮಾಹಿತಿಯನ್ನು ನೀಡಿದ್ದರು. ಸ್ಥಳಕ್ಕೆ ಬಂದ ತಂಡದವರು ತಕ್ಷಣ ಧರ್ಮಸ್ಥಳ ಪೊಲೀಸರಿಗೆ ಮಾಹಿತಿಯನ್ನು ನೀಡಿದರು. ಧರ್ಮಸ್ಥಳ, ಬೆಳಾಲು, ಉಜಿರೆಯ ವಿಪತ್ತು ತಂಡದ ಸದಸ್ಯರು ಶವವನ್ನು ಮೇಲಕ್ಕೆತ್ತಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಿದರು. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.