Home Posts tagged #bengalore (Page 2)

ವಿದ್ಯುತ್ ಬಿಲ್ ನಲ್ಲಿ ಅಕ್ರಮ, ಮೂವರ ಅಮಾನತು: ಸಚಿವ ಸುನಿಲ್ ಕುಮಾರ್

ಬೆಂಗಳೂರು: ವಿದ್ಯುತ್ ಬಿಲ್ ನಲ್ಲಿ ತಿದ್ದುಪಡಿ ಮಾಡಿ ಬೆಸ್ಕಾಂಗೆ ನಷ್ಟ ಉಂಟು ಮಾಡಿದ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿರುವುದಾಗಿ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಮುಳಬಾಗಿಲು ಉಪವಿಭಾಗದ ಮೆಹಬೂಬ್ ಪಾಷ, ಕಿರಿಯ ಸಹಾಯಕ, ಗಾಯತ್ರಮ್ಮ ,ಕಿರಿಯ ಸಹಾಯಕಿ ಹಾಗೂ ಸುಜಾತಮ್ಮ, ಕಿರಿಯ ಸಹಾಯಕಿ ,ಈ ಮೂವರು ಅಮಾನತಿ ಗೊಳಗಾದ

ಮಹಿಳೆಯರಿಂದ ಗಣೇಶ ವಿನ್ಯಾಸ ಇರುವ ಚಿನ್ನದ ಆಭರಣ ಉತ್ಸವ : ಸೆ.3ರಂದು ಸಚಿವ ಡಾ. ಸುಧಾಕರ್ ಚಾಲನೆ

ಬೆಂಗಳೂರು, ಆ 31; ಕೋವಿಡ್ ಸಂಕಷ್ಟದಿಂದ ಜನತೆ ಹೊರ ಬರುತ್ತಿರುವ ಸಂದರ್ಭದಲ್ಲೇ ಈ ಬಾರಿ ಗೌರಿ – ಗಣೇಶ ಹಬ್ಬಕ್ಕಾಗಿ ವಿಶೇಷವಾಗಿ ಯಲಹಂಕದ ಜಕ್ಕೂರಿನ ಮಧುರ ಮಿಲನ ಕಲ್ಯಾಣ ಮಂಟಪದಲ್ಲಿ ಸೆಪ್ಟೆಂಬರ್ 3 ರಿಂದ 5 ರ ವರೆಗೆ ಮಹಿಳೆಯರಿಂದಲೇ ವಿಶೇಷ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ಈ ಬಾರಿ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸಲು ಎಲ್ಲೆಡೆ ಸಿದ್ಧತೆಗಳು ನಡೆಯುತ್ತಿದ್ದು, ಹಬ್ಬಕ್ಕೆ ಹೊಳಪು ಮತ್ತು ಮೆರಗು ನೀಡಲು ಮಹಿಳೆಯರಿಂದಲೇ ವಿಶೇಷ ಆಭರಣ ಮೇಳ

1ನೇ ತರಗತಿಯಿಂದ ಶಾಲೆ ಆರಂಭಿಸಿ: ಪ್ರಕಾಶ್ ಅಂಚನ್ ನಿಯೋಗದಿಂದ ಶಿಕ್ಷಣ ಸಚಿವರಿಗೆ ಮನವಿ

ಬಂಟ್ವಾಳ: ಶಾಸಕ ರಾಜೇಶ್ ನಾಕ್ ನೇತೃತ್ವದಲ್ಲಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಅವರಿದ್ದ ನಿಯೋಗ ಬುಧವಾರ ಬೆಂಗಳೂರಿನ ಕಚೇರಿಯಲ್ಲಿ ರಾಜ್ಯ ಪ್ರಾಥಮಿಕ ಹಾಗೂ ಪೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರನ್ನು ಭೇಟಿ ಮಾಡಿತು. ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿರುವ ಶಾಲೆಗಳನ್ನು ಒಂದನೇ ತರಗತಿಯಿಂದಲೇ ಆರಂಭಿಸಬೇಕು ಎನ್ನುವ ನಿಯೋಗದ ಮನವಿಗೆ ಸ್ಪಂದಿಸಿದ ಸಚಿವರು 9 ಮತ್ತು 10ನೇ ತರಗತಿಗಳು ಆರಂಭಗೊಂಡ ಬಳಿಕ ಎರಡು ದಿನದಲ್ಲಿ

24 ಸ್ಟಾರ್ ಸ್ಟಾರ್ಟ್ ಅಪ್ ಗಳಿಗೆ ಎಂ.ಎಸ್. ರಾಮಯ್ಯ ಶಿಕ್ಷಣ ಸಂಸ್ಥೆಯಿಂದ ತಲಾ 50 ಲಕ್ಷ ರೂಪಾಯಿ ನೆರವು   ಎಂ.ಆರ್. ಸೀತಾರಾಂ

ಬೆಂಗಳೂರು: ರಾಮಯ್ಯ ಎವುಲೂಟ್, ಗೋಕುಲ ಶಿಕ್ಷಣ ಸಂಸ್ಥೆ ಹಾಗೂ ರಾಮಯ್ಯ ಸಮೂಹ ಸಂಸ್ಥೆಗಳ ನೆರವಿನಿಂದ ನಾವೀನ್ಯತೆ, ಭವಿಷ್ಯದ ಉತ್ಪನ್ನಗಳ ಉತ್ಪಾದನೆ, ಮುಂದಿನ ತಲೆಮಾರು ಬಳಕೆಯ ತಂತ್ರಜ್ಞಾನ ಸೇರಿ ವಿವಿಧ ಕ್ಷೇತ್ರಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ 24 ನವೋದ್ಯಮಗಳ [ಸ್ಟಾರ್ ಸ್ಟಾರ್ಟ್ ಅಪ್ ಗಳು] ಅಭ್ಯುದಯಕ್ಕಾಗಿ ತಲಾ 50 ಲಕ್ಷ ರೂಪಾಯಿ ನೆರವು ನೀಡಿ ಗೌರವಿಸಲಾಯಿತು. ಮತ್ತೀಕೆರೆಯ ಎಂ.ಎಸ್.ಆರ್.ಟಿ ಕ್ಯಾಂಪಸ್ ನಲ್ಲಿರುವ ಆಡಿಟೋರಿಯಂನಲ್ಲಿ ನವೋದ್ಯಮಗಳಿಗೆ

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನಕ್ಕೆ ಚಾಲನೆ

ಬೆಂಗಳೂರು:  ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನಕ್ಕೆ ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತಾ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಚಾಲನೆ ನೀಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎನ್.ಇ.ಪಿ ಸಹಾಯವಾಣಿ, ಉನ್ನತ ಶಿಕ್ಷಣ ಅಂತರಾಷ್ಟೀಕರಣ , 2021- 22 ನೇ ಸಾಲಿಗೆ ಉನ್ನತ ಶಿಕ್ಷಣಕ್ಕೆ ಪ್ರವೇಶಾತಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.

ಕು. ಅಮನ, ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ “ಕಿರಿಯ ಕವಯಿತ್ರಿ” ಎಂದು ದಾಖಲೆಗೆ ಸೇರ್ಪಡೆ

ಕು. ಅಮನ, 8 ನೇ ತರಗತಿ, ಬಿಷಪ್ ಕಾಟನ್ ಗಲ್ರ್ಸ್ ಸ್ಕೂಲ್, ಬೆಂಗಳೂರಿನಲ್ಲಿ ಓದುತ್ತಿದ್ದು, ಪ್ರತಿಷ್ಠಿತ ‘ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್’ ನಲ್ಲಿ “ಕಿರಿಯ ಕವಯಿತ್ರಿ” ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ “ಗ್ರ್ಯಾಂಡ್ ಮಾಸ್ಟರ್” ಆಗಿ ದಾಖಲಾಗಿದೆ. ವಿವರಗಳು ಹೀಗಿವೆ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್: ಅತ್ಯಂತ ಕಿರಿಯ ಕವಯಿತ್ರಿ ಎಂಬ ದಾಖಲೆಯನ್ನು ಬೆಂಗಳೂರಿನ ಕು. ಅಮನ (ಜನನ ಜೂನ್ 20, 2008 ರಂದು) ಮಾಡಿದ್ದಾರೆ. ಅವರು 61 ಕವನಗಳ

ಕನ್ನಡ ದಿನಪತ್ರಿಕೆ – ಕನ್ನಡ ಪುಸ್ತಕ ಓದಿ : ಸುನಿಲ್ ಕುಮಾರ್

ಬೆಂಗಳೂರು ಆಗಸ್ಟ್ 11-ಪ್ರತಿದಿನ ಕನ್ನಡ ಪತ್ರಿಕೆಯೊಂದನ್ನು ಓದುವ ಹಾಗೂ ತಿಂಗಳಿಗೊಂದು ಕನ್ನಡ ಪುಸ್ತಕ ಕೊಂಡು ಓದುವ, ಹಾಗೆಯೇ ಎರಡು ತಿಂಗಳಿಗೊಂದು ಕನ್ನಡ ಚಲನಚಿತ್ರ ನೋಡುವ ಅಭ್ಯಾಸ ಮಾಡಿಕೊಂಡರೆ ಆ ಮೂಲಕವೇ ಕನ್ನಡ ಭಾಷೆ ಮತ್ತು ಸಂಸ್ಕೃತಿ ಬೆಳೆಸುವಲ್ಲಿ ಜನರೂ ಸಹ ಪಾಲುಗೊಳ್ಳಲು ಸಾಧ್ಯವಾಗುತ್ತದೆ ಎಂದು ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದ್ದಾರೆ. ಅವರು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಭಾರತಾಂಬೆ ಹಾಗೂ

ಸಿಎಂ ಬೊಮ್ಮಾಯಿ ನಿವಾಸದೆದುರು ಮಹಿಳೆಯ ಏಕಾಂಗಿ ಪ್ರತಿಭಟನೆ

ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸ ಎದುರು ಇಂದು ಮಹಿಳೆಯೊಬ್ಬರು ಏಕಾಂಗಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.ಡಾ.ಗಿರಿಜಾ ಎಂಬವವರು ಪ್ರತಿಭಟನೆ ನಡೆಸಿದ್ದು, ಮಾಣಿಕ್ ಶಾ ಪರೇಡ್ ಮೈದಾನದ ನಿರೂಪಕರ ಬದಲಾವಣೆ ಮಾಡಲು ಈ ವೇಳೆ ಆಗ್ರಹಿಸಿದ್ದಾರೆ. ಪ್ರತಿ ಸರ್ಕಾರಿ ಕಾರ್ಯಕ್ರಮಕ್ಕೆ ಇಬ್ಬರೇ ನಿರೂಪಕರಿಗೆ ಅವಕಾಶ ನೀಡಲಾಗುತ್ತಿದೆ. ಆದರೆ ಕನ್ನಡದಲ್ಲಿ ಸಾಕಷ್ಟು ಉತ್ತಮವಾದ ನಿರೂಪಕರಿದ್ದಾರೆ. ಈಗಿದ್ದರೂ ಯಾವ ಕಲಾವಿದರಿಗೂ ಅವಕಾಶ ಸಿಗುತ್ತಿಲ್ಲ. ಇದೇ ರೀತಿ

ನೂತನ ಸಚಿವರ ಅಂತಿಮ ಪಟ್ಟಿ ಬಿಡುಗಡೆ

ಇಂದು ಪ್ರಮಾಣವಚನ ಸ್ವೀಕರಿಸಲಿರುವ ನೂತನ 29 ಮಂದಿ ಶಾಸಕರ ಅಧಿಕೃತ ಪಟ್ಟಿ ಬಿಡುಗಡೆಗೊಂಡಿದೆ. 1.ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ 2.ಆರ್.ಅಶೋಕ್- ಪದ್ಮನಾಭ ನಗರ 3.ಬಿ.ಸಿ ಪಾಟೀಲ್ – ಹಿರೇಕೇರೂರು 4.ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ 5.ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು 6.ಉಮೇಶ್ ಕತ್ತಿ- ಹುಕ್ಕೇರಿ 7.ಎಸ್.ಟಿ.ಸೋಮಶೇಖರ್- ಯಶವಂತಪುರ 8.ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ 9.ಬೈರತಿ‌ ಬಸವರಾಜ – ಕೆ ಆರ್ ಪುರಂ

ಉಡುಪಿ ಜಿಲ್ಲೆಯ ಮೂವರು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪ್ರದಾನ

ಅಗ್ನಿ ಶಾಮಕ ದಳ ಹಾಗೂ ತುರ್ತು ಸೇವಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಡುಪಿ ಜಿಲ್ಲೆಯ ಮೂವರು ಸಿಬ್ಬಂದಿಗಳಿಗೆ ಕರ್ನಾಟಕ ಸರಕಾರದಿಂದ ನೀಡುವ ಚಿನ್ನದ ಪದಕವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ನೀಡಿ ಗೌರವಿಸಿದ್ದಾರೆ.  ಇಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಪದಕ‌ ಪ್ರಧಾನ ಕಾರ್ಯಕ್ರಮದಲ್ಲಿ ಅಗ್ನಿ ಶಾಮಕ ದಳ ಜಿಲ್ಲಾ ಮುಖ್ಯ ಅಧಿಕಾರಿ ಹೆಚ್ ಎಂ ವಸಂತ್ ಕುಮಾರ್, ಅಶ್ವಿನ್ ಸನಿಲ್ ಹಾಗೂ ಎಂ. ಕೇಶವ್ ಇವರಿಗೆ ಮುಖ್ಯಮಂತ್ರಿಗಳಿಂದ