ಬೆಂಗಳೂರು : ಅರಮನೆಯಂತೆ ಕಂಗೋಳಿಸುತ್ತಿದೆ ಕೆಂಪೇಗೌಡ ವಿಮಾನ ನಿಲ್ದಾಣ

ದೇಶಿ ಹಾಗೂ ವಿದೇಶಿ ಪ್ರಯಾಣಿಕರಿಗೆ ಐಶಾರಾಮಿ ಸೇವೆಯನ್ನು ಇಲ್ಲಿ ಒದಗಿಸಲಾಗುತ್ತದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನವ ವಿನ್ಯಾಸದ ಹೈಟೆಕ್ ನಿಲ್ದಾಣ ಅನಾವರಣಗೊಂಡಿದೆ ಟರ್ಮಿನಲ್ 2 ಅನ್ನು ಉದ್ಯಾನ ನಗರಿ ಬೆಂಗಳೂರಿನ ಗೌರವಾರ್ಥವಾಗಿ ವಿನ್ಯಾಸಗೊಳಿಸಲಾಗಿದೆ. ಉದ್ಯಾನವನದಲ್ಲಿ ನಡೆದಂತ ಅನುಭವವನ್ನು ಇದು ಪ್ರಯಾಣಿಕರಿಗೆ ನೀಡುತ್ತದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುಮಾರು 5000 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಹೊಸ ಟರ್ಮಿನಲ್ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯ ಮತ್ತು ಚೆಕ್ ಇನ್ ಮತ್ತು ಕೌಂಟರ್ಗಳ ಸಂಖ್ಯೆ ಕೂಡ ದ್ವಿಗುಣಗೊಳ್ಳುತ್ತವೆ. ಇದು ಜನರಿಗೆ ತುಂಬಾ ಸಹಾಯವಾಗಲಿದೆ. ಪ್ರಸ್ತುತ ಇರುವ 2.5 ಕೋಟಿ ಜನರ ಸಾಮರ್ಥ್ಯಕ್ಕೆ ಹೋಲಿಸಿದರೆ ವಾರ್ಷಿಕವಾಗಿ ಸುಮಾರು ಐದರಿಂದ ಆರು ಕೋಟಿ ಪ್ರಯಾಣಿಕರನ್ನು ನಿಭಾಯಿಸಲು ಈ ವಿಮಾನ ನಿಲ್ದಾಣಕ್ಕೆ ಸಾಧ್ಯವಾಗುತ್ತದೆ.

ಪ್ರಯಾಣಿಕರು 10,000ಕ್ಕೂ ಅಧಿಕ ಚದರ್ ಮೀಟರ್ಗಳಷ್ಟು ಹಸಿರು ಗೋಡೆಗಳು ಮತ್ತು ಅದ್ಭುತವಾಗಿ ಕಾಣುವ ಉದ್ಯಾನಗಳು ಮತ್ತು ಹೊರಾಂಗಣ ಉದ್ಯಾನಗಳ ಮೂಲಕ ಪ್ರಯಾಣಿಕರನ್ನು ರಂಜಿಸುತ್ತದೆ. ಈ ವಿಮಾನ ನಿಲ್ದಾಣ ಈಗಾಗಲೇ ಸಂಪೂರ್ಣ ಸಿದ್ಧವಾಗಿದ್ದು ಅತ್ಯುತ್ತಮ ತಂತ್ರಜ್ಷಾನ ಒಳಗೊಂಡಿದೆ. ಸುಂದರವಾದ ವಿನ್ಯಾಸದಿಂದ ಕೂಡಿದ್ದು ಅರಮನೆಯಂತೆ ಕಂಗೊಳಿಸುತ್ತಿದೆ. ದೇಶಿ ಹಾಗೂ ವಿದೇಶಿ ಪ್ರಯಾಣಿಕರಿಗೆ ಐಶಾರಾಮಿ ಸೇವೆಯನ್ನು ಇಲ್ಲಿ ಒದಗಿಸಲಾಗುತ್ತದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನವ ವಿನ್ಯಾಸದ ಹೈಟೆಕ್ ಗಮನ ಸೆಳೆಯುತ್ತಿದೆ.