Home Posts tagged #mundkuru

ಮುಂಡ್ಕೂರು: ನೇಪಥ್ಯಕ್ಕೆ ಸರಿದ ಸಂಕಲಕರಿಯ ಹಿರಿಯ ಪ್ರಾಥಮಿಕ ಶಾಲೆ

ಸುಮಾರು ನೂರು ವರ್ಷಗಳ ಕಾಲ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯ ಬರೆದಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕೊರತೆಯಿಂದ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಂಕಲಕರಿಯ ಪ್ರಾಥಮಿಕ ಶಾಲೆ ಮುಚ್ಚಿ ಹೋಗಿದೆ. ಆಂಗ್ಲ ಮಾಧ್ಯಮ ಶಾಲೆಗಳ ವೈಭವೀಕರಣ ಹಾಗೂ ಪೋಷಕರಿಂದ ಆಂಗ್ಲ ಮಾಧ್ಯಮ ಶಾಲೆಗಳ ವ್ಯಾಮೊಹಗಳ ಕಾರಣದಿಂದ ವಿದ್ಯಾರ್ಥಿಗಳ

ಮುಂಡ್ಕೂರು : ಹಡಿಲು ಬಿದ್ದ ಭೂಮಿಯಲ್ಲಿ ಭತ್ತದ ಕೃಷಿ

ಮುಂಡ್ಕೂರು ಸಮೃದ್ಧಿ ಸಂಜೀವಿನಿ ಒಕ್ಕೂಟದ ವತಿಯಿಂದ ಮುಂಡ್ಕೂರು ಜೈನಪೇಟೆಯ ಬಳಿ ಗದ್ದೆಯಲ್ಲಿ ಒಕ್ಕೂಟದ ಮಹಿಳೆಯರು ಗದ್ದೆ ನಾಟಿ ಮಾಡಿದರು. ಸುಮಾರು ಒಂದು ಎಕರೆ ಹಡಿಲು ಭೂಮಿಯನ್ನು ಸಮತಟ್ಟು ಮಾಡಿ ಟ್ಯಾಕ್ಟರ್ ಮೂಲಕ ಉಳುಮೆ ಮಾಡಿ ನಾಟಿ ಮಾಡಿದರು. ಈ ಸಂದರ್ಭದಲ್ಲಿ ಸಮೃದ್ಧಿ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ವನಿತಾ ಶೆಟ್ಟಿ ಎಲ್ ಸಿ ಆರ್ ಪಿ ಶಶಿಕಲಾ, ಸುಮನ ಒಕ್ಕೂಟದ ಅಧ್ಯಕ್ಷರಾದ ಹರಿಣಾಕ್ಷಿ ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ಕಾರ್ಕಳ : ಮನೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನ

ಮನೆಯೊಂದರ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಗೀತಾ ಎಂಬವರ ಮನೆಯಲ್ಲಿ ನಡೆದಿದೆ. ಸುಂದರ ಕುಲಾಲ್ ಎಂಬವರ ಪತ್ನಿ ಗೀತಾ ಅವರು ಅತ್ತೂರಿನ ತಾಯಿ ಮನೆಗೆ ಹೋಗಿದ್ದರು. ರಾತ್ರಿಯ ವೇಳೆಗೆ ಕಳ್ಳರು ಮನೆಯ ಮುಂದಿನ ಬಾಗಿಲನ್ನು ಮುರಿದು ಕಳ್ಳತನಕ್ಕೆ ವಿಫಲ ಯತ್ನ ಮಾಡಿದ್ದಾರೆ. ನೆರೆಮನೆಯವರು ಗೀತಾ ಅವರ ಮನೆಯ ಬಾಗಿಲು ತೆರೆದಿದ್ದ ಕಾರಣ ಬಂದು ನೋಡಿದಾಗ ಮನೆಯಲ್ಲಿ ದರೋಡೆಯಾದ ವಿಚಾರ ಬೆಳಕಿಗೆ ಬಂದಿದೆ. ಮನೆಯೊಳಗಿದ್ದ

ಮುಂಡ್ಕೂರು : ಮರಳುಗಾರಿಕೆಗೆ ಅವಕಾಶ ನೀಡುವುದಿಲ್ಲವೆಂದು ಪಟ್ಟು ಹಿಡಿದ ಸ್ಥಳೀಯರು

ಮುಂಡ್ಕೂರು ಗ್ರಾಮ ಪಂಚಾಯತ್ 2022- 23ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷೆ ಸುಶೀಲಾ ಬಾಬು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೃಷಿ ಇಲಾಖೆಯ ಸತೀಶ್ ನೋಡಲ್ ಅಧಿಕಾರಿಯಾಗಿದ್ದರು. ಸಂಕಲಕರಿಯದ ಉಗ್ಗೆದಬೆಟ್ಟು ಹಾಗೂ ಕೃಷ್ಣ ಬೆಟ್ಟು ನಿವಾಸಿಗಳ ನಡುವೆ ಮರಳುಗಾರಿಕೆ ಹಾಗೂ ರಸ್ತೆ ಅಗೆತದ ಬಗ್ಗೆ ಭಾರಿ ಮಾತಿನ ಚಕಮಕಿ ನಡೆಯಿತು. ಪಂಚಾಯತ್ ಮಾಜಿ ಸದಸ್ಯ ಸೋಮನಾಥ್ ಪೂಜಾರಿ ಉಗ್ಗೆದಬೆಟ್ಟು ನಿವಾಸಿಗಳ ಪರವಾಗಿ ಮಾತನಾಡಿ,

ಮಧ್ಯಂತರ ಸಮ್ಮೇಳನದಲ್ಲಿ ಮುಂಡ್ಕೂರು ಜೇಸಿಸ್ ಗೆ ಹಲವು  ಪ್ರಶಸ್ತಿ

  ಮುಂಡ್ಕೂರು;ಪ್ರತೀ ವರ್ಷ ರಕ್ತದಾನ ಶಿಬಿರ, ತರಬೇತಿ ಕಾರ್ಯಾಗಾರ, ಉಚಿತ ಯೋಗ ಶಿಬಿರ, ಶಾಶ್ವತ ಯೋಜನೆ ಮುಂತಾದ ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುತ್ತಾ ಜೇಸಿಯ ಕಂಪನ್ನು ಎಲ್ಲೆಡೆ ಪಸರಿಸಿರುವ ಘಟಕ ಜೇಸಿಐ ಮುಂಡ್ಕೂರು ಭಾರ್ಗವ. ಈ ವರ್ಷ ಪ್ರಶಾಂತ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಕೋವಿಡ್ ಸಮಯದಲ್ಲಿ ಅಶಕ್ತರಿಗೆ ಕಿಟ್ ವಿತರಣೆ,  ಸಾಧಕ ಮಹಿಳೆಯರಿಗೆ ಅಭಿನಂದನಾ ಕಾರ್ಯಕ್ರಮ,  ಹಲವು ತರಬೇತಿ ಕಾರ್ಯಕ್ರಮ, ಅಂತರಾಷ್ಟ್ರೀಯ ಯೋಗ ದಿನ, ನಿರಂತರ ಉಚಿತ ಯೋಗ ಶಿಬಿರ,