ಕಾರ್ಕಳ : ಮನೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನ
ಮನೆಯೊಂದರ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಗೀತಾ ಎಂಬವರ ಮನೆಯಲ್ಲಿ ನಡೆದಿದೆ.
ಸುಂದರ ಕುಲಾಲ್ ಎಂಬವರ ಪತ್ನಿ ಗೀತಾ ಅವರು ಅತ್ತೂರಿನ ತಾಯಿ ಮನೆಗೆ ಹೋಗಿದ್ದರು. ರಾತ್ರಿಯ ವೇಳೆಗೆ ಕಳ್ಳರು ಮನೆಯ ಮುಂದಿನ ಬಾಗಿಲನ್ನು ಮುರಿದು ಕಳ್ಳತನಕ್ಕೆ ವಿಫಲ ಯತ್ನ ಮಾಡಿದ್ದಾರೆ. ನೆರೆಮನೆಯವರು ಗೀತಾ ಅವರ ಮನೆಯ ಬಾಗಿಲು ತೆರೆದಿದ್ದ ಕಾರಣ ಬಂದು ನೋಡಿದಾಗ ಮನೆಯಲ್ಲಿ ದರೋಡೆಯಾದ ವಿಚಾರ ಬೆಳಕಿಗೆ ಬಂದಿದೆ.
ಮನೆಯೊಳಗಿದ್ದ ಕಪಾಟು ಒಡೆಯಲಾಗದ ಕಾರಣ ಯಾವುದೇ ವಸ್ತುಗಳನ್ನು ಕಳ್ಳರಿಗೆ ದೋಚಲು ಸಾಧ್ಯವಾಗಲಿಲ್ಲ. ಘಟನಾ ಸ್ಥಳಕ್ಕೆ ಕಾರ್ಕಳ ಪೆÇಲೀಸರು ಭೇಟಿ ನೀಡಿ ಪರಿಶೀಲಿಸಿ ತನಿಖೆ ಮುಂದುವರಿಸಿದ್ದಾರೆ.