ಮೂಡುಬಿದಿರೆ: SSLC ಫಲಿತಾಂಶ -ರೋಟರಿ ಆಂಗ್ಲ ಮಾಧ್ಯಮ ಶಾಲೆಗೆ 100% ಫಲಿತಾಂಶ

ಮೂಡುಬಿದಿರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರೋಟರಿ ಎಜುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟ ರೋಟರಿ ಆಂಗ್ಲ ಮಾಧ್ಯಮ ಶಾಲೆಯು ಶೇ.100 ಫಲಿತಾಂಶವನ್ನು ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ 112 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 41 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 67 ವಿದ್ಯಾರ್ಥಿಗಳು ಪ್ರಥಮ ದರ್ಜೆ, ಮೂವರು ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ ಒರ್ವ ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಂಚಿತಾ ಎಸ್. ಸುವರ್ಣ 613 (ಶೇ.98.08) ಅಂಕಗಳನ್ನು ಪಡೆದು ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.



ಸಾನಿಧ್ಯ ಡಿ. 606 (ಶೇ.96.96), ಚಿನ್ಮಯಿ ಶೆಣೈ 605 (ಶೇ.96.80) ಅಂಕಗಳನ್ನು ಪಡೆಯುವುದರೊಂದಿಗೆ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಹಾಗೂ ಶ್ರದ್ಧಾ 603 (ಶೇ.96.48) ಪಡೆದಿದ್ದಾರೆ. ಭಾಷಾ ವಿಷಯಗಳಲ್ಲಿ ಒಟ್ಟು 13 ವಿದ್ಯಾರ್ಥಿಗಳು ವಿಷಯವಾರು ಪೂರ್ಣ ಅಂಕಗಳನ್ನು ಪಡೆದಿದ್ದಾರೆ.
ಶ್ರೀಜಾ ಎಸ್.ಪೂಜಾರಿ 598, ದಿಶಾ ರಾಜ್ 597, ತನ್ವಿ ವಿಜಯ್ ಕೋಟ್ಯಾನ್ 596, ರಿದ್ಯಾ ಎ.ಸುವರ್ಣ 591, ಸೃಜನ್ ವಿ. 591, ಶ್ರಾವ್ಯ ಪಿ. 588, ಸಂಶಿತಾ ಉಡುಪ 587, ಸಾನ್ವಿ ದೇವಾಡಿಗ 586, ಅನಾನ್ ಅಶ್ರಫ್ 585, ವರ್ಷ 584, ಫಾತಿಮಾ ಶಿಫಾ, ಅನನ್ಯಾ ಎನ್.ಉಡುಪ 580 ಅಂಕಗಳನನ್ನು ಪಡೆದಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು, ಶಿಕ್ಷಕ ವೃಂದದವರನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಪಿ.ಎಂ., ಕಾರ್ಯದರ್ಶಿ ಅನಂತಕೃಷ್ಣ ರಾವ್, ಸಂಚಾಲಕ ಪ್ರವೀಣ್‌ಚಂದ್ರ ಜೈನ್ ಅಭಿನಂದಿಸಿದ್ದಾರೆ.
