ಮಂಗಳೂರು : SSLC ಫಲಿತಾಂಶ – ಬಿ.ಜಿ.ಎಸ್. ವಿದ್ಯಾರ್ಥಿ ಮಹಿತ್ ಕುಮಾರ್ ಗೆ 607 ಅಂಕ

ಮಂಗಳೂರು : ಕಾವೂರಿನ ಬಿ.ಜಿ.ಎಸ್. ಹೈಸ್ಕೂಲ್ ವಿದ್ಯಾರ್ಥಿ ಮಹಿತ್ ಕುಮಾರ್ ಈ ಬಾರಿಯ SSLC ಪರೀಕ್ಷೆಯಲ್ಲಿ 607 ಅಂಕ ಪಡೆದು 97.12 % ದಾಖಲೆಯ ಸಾಧನೆ ಮಾಡಿದ್ದಾನೆ.

ಬಿ.ಜಿ.ಎಸ್. ಶಾಲೆಯ ಗರಿಷ್ಠ ಅಂಕ ಪಡೆದ ಟಾಪರ್ ವಿದ್ಯಾರ್ಥಿಯಾಗಿರುವ ಮಹಿತ್ ಕುಮಾರ್ ಅವರು ಭಾಸ್ಕರ್ ಗಟ್ಟಿ ಕೌಡೂರು ಹಾಗೂ ಸೌಮ್ಯ ಗಟ್ಟಿ ನಡಾರ್ ಇವರ ಪುತ್ರ. ಗರಿಷ್ಠ ಅಂಕದೊಂದಿಗೆ ಶಾಲೆಗೆ ಕೀರ್ತಿ ತಂದ ಸಾಧನೆ ಮಾಡಿದ ಮಹಿತ್ ಅವರನ್ನು ಶಾಲಾಡಳಿತ ಮಂಡಳಿ ಅಭಿನಂದಿಸಿದೆ.
