HEJAMADI TOLL ಹೆಜಮಾಡಿ ಟೋಲ್‍ನೊಂದಿಗೆ ಸುರತ್ಕಲ್ ಟೋಲ್ ವಿಲೀನಕ್ಕೆ ವಿರೋಧ

ನಾನು ಆಢಳಿತ ಪಕ್ಷದ ಪ್ರತಿನಿಧಿಯಾಗಿದ್ದರೂ..ಜನರಿಗೆ ಸಮಸ್ಯೆಯೊಡ್ಡುವ ಸುರತ್ಕಲ್ ಟೋಲನ್ನು ಹೆಜಮಾಡಿ ಟೋಲ್ ನೊಂದಿಗೆ ವಿಲಿನಗೊಳ್ಳಿಸುವ ಪ್ರಕ್ರಿಯೆಗೆ ನನ್ನ ವಿರೋಧವಿದೆ ಎಂಬುದಾಗಿ ಕಾಪು ಶಾಸಕ ಲಾಲಾಜಿ ಮೆಂಡನ್ ಹೇಳಿದ್ದಾರೆ.ಕಾಪುವಿನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭ ಈ ಟೋಲ್ ಗೇಟ್ ಗಳು ಅಸ್ತಿತ್ವಕ್ಕೆ ಬಂದಿದ್ದವುಗಳು, ಒಂದು ಟೋಲ್ ಗೇಟ್ ನಿಂದ ಮತ್ತೊಂದು ಟೋಲ್ ಗೇಟ್ ಗೆ 60 ಕೀ.ಮೀ. ಅಂತರ ಇರ ಬೇಕೆಂದಿದ್ದರೂ ಈ ಅಂತರದಲ್ಲಿ ಮೂರು ಟೋಲ್ ಗೇಟ್ ಗಳಿದೆ, ಈ ಬಗ್ಗೆ ಜಿಲ್ಲಾಧಿಕಾರಿಗಳು ಸಹಿತ ನಮ್ಮ ಪಕ್ಷದ ಪ್ರಮುಖರಲ್ಲಿ ಮಾತುಕತೆ ನಡೆಸಲಾಗಿದೆ, ಇದು ಕೇವಲ ನನ್ನ ಒತ್ತಡ ಮಾತ್ರ ಸಾಲದು ಸಾರ್ವಜನಿಕವಾಗಿ ಒತ್ತಡ ಅಗತ್ಯವಿದೆ ಎಂದರು. ಹೋರಾಟದಲ್ಲಿ ಭಾಗವಹಿಸುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನನಗೆ ಪ್ರತಿಭಟನೆಗೆ ಯಾವುದೇ ಯಾರಿಂದಲೂ ಆಹ್ವಾನ ಬಂದಿಲ್ಲ, ಆದರೆ ಇಂದು ಸಾರ್ವಜನಿಕ ಸಮಸ್ಯೆ ಯಾಗಿದ್ದ ಕಾರಣ ನನ್ನ ಹಿತಿ ಮಿತಿಯಲ್ಲಿ ಹೋರಾಟಕ್ಕೆ ಸ್ಪಂದಿಸುತ್ತೇನೆ ಎಂದು ಶಾಸಕರು ಹೇಳಿದರು.
