ಮೂಡುಬಿದಿರೆಯ ಪುರಸಭೆಯಲ್ಲಿ ಶಾಸಕ ಉಮಾನಾಥ ಎ.ಕೋಟ್ಯಾನ್ ಧ್ವಜವನ್ನು ಅರಳಿಸಿ 75ನೇ ವರ್ಷದ ಗಣರಾಜ್ಯದ ಸಂದೇಶವನ್ನು ನೀಡಿದರು . ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಸದಸ್ಯ ಕೊರಗಪ್ಪ, ಮುಖ್ಯಾಧಿಕಾರಿ ಇಂದು ಎಂ, ಸಿಬಂದಿಗಳಾದ ಸುಧೀಶ್ ಹೆಗ್ಡೆ, ಮೂಡುಬಿದಿರೆ ಲೇಬರ್ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮೂಡುಬಿದಿರೆ : ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರು ಎಲ್ಲಾ ಸಮುದಾಯಗಳಿಗೂ ಸಮಾನ ಆದ್ಯತೆ ನೀಡಿದ್ದು ಊರಿನ ಪ್ರಗತಿಗಾಗಿ ದೊಡ್ಡ ಕೊಡುಗೆ ನೀಡಿದ್ದಾರೆ. ಜಾತಿಮತ ಬೇಧವಿಲ್ಲದೆ ಸ್ಪಂದಿಸಿದ್ದಾರೆ. ಈಗ ಅವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿ ಮತದಾರರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಕಿವಿಗೊಡದೆ ಆತ್ಮಸಾಕ್ಷಿಯಾಗಿ ಮತಚಲಾಯಿಸಬೇಕು ಎಂದು ಹುನುಮಂತ, ವೆಂಕಟರಮಣ ದೇವಳಗಳ ಆಡಳಿತ ಮೊಕ್ತೇಸರ ಜಿ ಉಮೇಶ್ ಪೈ ಹೇಳಿದರು.
ಮೂಡುಬಿದಿರೆ: ಇರುವೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಡಾರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ ಎ.ಕೋಟ್ಯಾನ್ ಅವರು ಮತ ಪ್ರಚಾರ ನಡೆಸಿದರು.ಈ ಸಂದರ್ಭ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾದ ಸಚಿನ್ ಶೆಟ್ಟಿ ಅವರು ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಯ ಶೈಲಿಯನ್ನು ಮೆಚ್ಚಿ ಕೋಟ್ಯಾನ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ವಕೀಲ ಶಾಂತಿಪ್ರಸಾದ್ ಹೆಗ್ಡೆ,ಪಂಚಾಯತ್ ಸದಸ್ಯರುಗಳಾದ
ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಗಾಂಧಿನಗರದ ಕಡ್ದಬೆಟ್ಟು ವಾಡ್ 9ನಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ ಎ.ಕೋಟ್ಯಾನ್ ಅವರು ಕಾರ್ಯಕರ್ತರ ಜತೆ ಮಾತುಕತೆ ನಡೆಸಿ ಮತದಾನ ಮಾಡುವಂತೆ ವಿನಂತಿಸಿದರು. ನಂತರ ಕಾರ್ಯಕರ್ತರು ಕಡ್ದಬೆಟ್ಟು ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಪರವಾಗಿ ಮತಯಾಚಿಸಿದರು.ವಾಡ್ 9 ಸದಸ್ಯೆ ದಿವ್ಯಾ ಜಗದೀಶ್, ಮಂಡಲದ ಕೋಶಾಧಿಕಾರಿ ಹರೀಶ್ ಎಂ.ಕೆ, 64ನೇ ವಾರ್ಡಿನ ಬೂತ್ ಅಧ್ಯಕ್ಷ ವಸಂತ, 65ನೇ ವಾರ್ಡಿನ ಬೂತ್
ಮೂಡುಬಿದಿರೆ: ಮುಲ್ಕಿ – ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ್ ಎ. ಕೋಟ್ಯಾನ್ ಅವರು ಸಹಸ್ರಾರು ಸಂಖ್ಯೆಯ ಕೇಸರಿಪಡೆಯೊಂದಿಗೆ ಮೆರವಣಿಗೆಯಲ್ಲಿ ಆಡಳಿತ ಸೌಧಕ್ಕೆ ಆಗಮಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಕೋಟ್ಯಾನ್ ಅವರು ಕಳೆದ ಐದು ವರ್ಷಗಳಲ್ಲಿ ಎರಡು ವರ್ಷ ಕೊರೋನಾದಿಂದಾಗಿ ಸಮಸ್ಯೆಯಾಗಿತ್ತು. ಆದರೆ ಮೂರು ವರ್ಷಗಳಲ್ಲಿ ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ತರುವ ಮೂಲಕ ಅಭಿವೃದ್ಧಿ ಪಡಿಸಲಾಗಿದೆ.
ಮೂಡುಬಿದಿರೆ: ತಾವು ಮನೆಯಲ್ಲಿ ಬೆಳೆಸಿದ ತರಕಾರಿಗಳಾದ ಬಸಳೆ, ಹೀರೆಕಾಯಿ, ಸೌತೆಕಾಯಿ, ಅಮಟೆಕಾಯಿ, ಬಾಳೆಕಾಯಿ, ಸ್ವ ಉದ್ಯೋಗಕ್ಕಾಗಿ ತಯಾರಿಸಿದ ಉಪ್ಪಿನಕಾಯಿ, ಹಿಡಿಸೂಡಿಯ ಕಟ್ಟುಗಳು, ಬೀಳುಗಳಿಂದ ತಯಾರಿಸಿದ ಬುಟ್ಟಿಗಳು, ತೆಂಗಿನ ಗೆರಟೆಯನ್ನು ಬಳಸಿ ಮಾಡಿದ ಸೌಟುಗಳು, ವೇಸ್ಟ್ ಬಟ್ಟೆಗಳನ್ನು ಬಳಸಿ ಮಾಡಿದ ಬಣ್ಣ ಬಣ್ಣದ ಕಾಲು ಒರೆಸುವ ಬಟ್ಟೆಗಳು, ತಿಂಡಿ-ತಿನಿಸುಗಳು, ಮಾರಾಟಗಳೊಂದಿಗೆ ಮಹಿಳೆಯರು ಭರ್ಜರಿ ವ್ಯಾಪಾರ-ವಹಿವಾಟನ್ನು ಮಾಡುವ ಮೂಲಕ ಸ್ವಾವಲಂಬಿಗಳಾಗಿ