ತೋಡಾರು ಗ್ರಾಮದಲ್ಲಿ ಉಮಾನಾಥ ಕೋಟ್ಯಾನ್ ಮತಪ್ರಚಾರ : ಕಾಂಗ್ರೆಸ್ ಮುಖಂಡ ಸಚಿನ್ ಶೆಟ್ಟಿ ಬಿಜೆಪಿಗೆ ಸೇರ್ಪಡೆ

ಮೂಡುಬಿದಿರೆ: ಇರುವೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಡಾರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ ಎ.ಕೋಟ್ಯಾನ್ ಅವರು ಮತ ಪ್ರಚಾರ ನಡೆಸಿದರು.
ಈ ಸಂದರ್ಭ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾದ ಸಚಿನ್ ಶೆಟ್ಟಿ ಅವರು ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಯ ಶೈಲಿಯನ್ನು ಮೆಚ್ಚಿ ಕೋಟ್ಯಾನ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ವಕೀಲ ಶಾಂತಿಪ್ರಸಾದ್ ಹೆಗ್ಡೆ,ಪಂಚಾಯತ್ ಸದಸ್ಯರುಗಳಾದ ಜಯಶಂಕರ್ ಸಪಳಿಗ, ಪ್ರವೀಣ್ ಶೆಟ್ಟಿ, ನವ್ಯ, ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನದ ಗುರಿಕಾರರಾದಂತಹ ದಿನಕರ್ ಸೇರಿದಂತೆ ಪಕ್ಷದ ಮುಖಂಡರಾದ ರಂಜಿತ್ ಪೂಜಾರಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.