HomeFresh Newsಕಡಲನು ಬಯಸದ ನದಿಯಿದುವು | ಕಾಯಂ ಜವುಗು ನೆಲದಿ ಮುಗಿಯುವುದು | ಲೋಕದ ವಿಶೇಷ ನದಿ...

ಕಡಲನು ಬಯಸದ ನದಿಯಿದುವು | ಕಾಯಂ ಜವುಗು ನೆಲದಿ ಮುಗಿಯುವುದು | ಲೋಕದ ವಿಶೇಷ ನದಿ ಜಾಲವಿದುವು

ಆಫ್ರಿಕಾ ಖಂಡದ ನಾಲ್ಕನೆಯ ಅತಿ ದೊಡ್ಡ ನದಿ ಜಾಲವಾದ ಓಕವಾಂಗೊ ನದಿಯು ಓಡುವ ನದಿ ಸಮುದ್ರವನ್ನು ಸೇರದಿರುವುದು ಎಂಬುದೇ ವಿಶೇಷ.

ಓಕವಾಂಗೋ ನದಿಯು ಅಂಗೋಲ ದೇಶದ ಬಡಗಣ ಭಾಗದ ಬೆಟ್ಟದಲ್ಲಿ ಹುಟ್ಟುತ್ತದೆ; 5,840 ಅಡಿ ಎತ್ತರದ ಪ್ರದೇಶದಲ್ಲಿ ಇದರ ಹುಟ್ಟು.

ಅಂಗೋಲ ದೇಶದ ಬಯಲುಗಳಲ್ಲಿ ಹರಿದು, ಒಂದಷ್ಟು ದೂರ ಅಂಗೋಲ ಹಾಗೂ ನಮೀಬಿಯಾ ದೇಶಗಳಿಗೆ ಗಡಿಯಾಗುತ್ತದೆ.

ಮುಂದೆ ಬೋಟ್ಸ್‌ವಾನಾ ದೇಶದ ನಡು ಭಾಗವನ್ನು ಸೇರುತ್ತದೆ.

1,600 ಕಿಲೋಮೀಟರ್ ಉದ್ದದ ಓಕವಾಂಗೊ ನದಿ ಪ್ರಮುಖ ನದಿ ಜಾಲವಾಗಿದೆ.

ಬೋಟ್ಸ್‌ವಾನಾದಲ್ಲಿ ಇದರ ನದಿಮುಖಜವು ಕಾಯಂ ಜವುಗು ಪ್ರದೇಶ ಎನಿಸಿದೆ. ಮಳೆಗಾಲದಲ್ಲಿ ಇಲ್ಲಿ ನೆರೆ ತುಂಬಿರುತ್ತದೆ.

ಇತರ ಕಾಲಗಳಲ್ಲಿ ಕೆಸರು, ಜವುಗು, ಅಲ್ಲಿಯದೇ ಆದ ವಿಶೇಷ ಸಸ್ಯಗಳು, ಜೀವಜಾಲ ಇಲ್ಲಿ ಇದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments