ತೋಕೂರು: ಏ.6ರಿಂದ ಏ.13ರ ವರೆಗೆ ಬೇಸಿಗೆ ಶಿಬಿರ

ತೋಕೂರಿನ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆ, ಯುವ ವೇದಿಕೆಯ ಪ್ರಾಯೋಜಕತ್ವದಲ್ಲಿ ಉಚಿತ ಬೇಸಿಗೆ ಶಿಬಿರ ನಡೆಯಲಿದೆ.
ಎಪ್ರಿಲ್ 6ರಿಂದ ಎಪ್ರಿಲ್ 13ರ ವರೆಗೆ ಬೇಸಿಗೆ ಶಿಬಿರ ನಡೆಯಲಿದೆ. ಎಪ್ರಿಲ್ 6ರಂದು ತೋಕೂರಿನ ಎಸ್. ಕೋಡಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ ಮತ್ತು ನೀತಿ ಶಿಕ್ಷಣ, ನೃತ್ಯ ತರಬೇತಿ, ಭಜನೆ ಮತ್ತು ಸಂಗೀತ, ನೀತಿ ಕಥೆಗಲು, ಮೊಬೈಲ್ ಬಳಕೆ, ಪೋಕ್ಸೋ ಕಾಯ್ದೆ ಹೆಣ್ಣು ಮಕ್ಕಳ ಹಕ್ಕುಗಳು ಬಗ್ಗೆ ಉಪನ್ಯಾಸ, ಉತ್ತಮ ಆರೋಗ್ಯಕ್ಕಾಗಿ ನಮ್ಮ ಆಹಾರ ಪದ್ಧತಿ, ಗುಂಪು ಚರ್ಚೆ, ಯಕ್ಷಗಾನದ ಅರಿವು, ಅವೆ ಮಣ್ಣಿನ ಕಲಾಕೃತಿ, ಭಗವದ್ಗೀತೆ, ನೃತ್ಯ, ಸಂವಹನ ಕೌಶಲ್ಯ ಮತ್ತು ನಿರೂಪಣೆ, ನಡೆಯಲಿದೆ. ಏಪ್ರಿಲ್ ೧೩ರಂದು ತೋಕೂರಿನ ಪದ್ಮಾವತಿ ಲಾನ್ ಎಸ್. ಕೋಡಿಯಲ್ಲಿ ಸಮಾರೋಪ ನಡೆಯಲಿದೆ.