ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್. ಮಿಜಾರು, ದ. ಕ. : ಆರ್ಥಿಕ ನೆರವು – ಚೆಕ್ ಹಸ್ತಾಂತರ

ಮಂಗಳೂರು ತಾಲೂಕಿನ ಮುತ್ತೂರು ಗ್ರಾಮದ ನಿವಾಸಿಯಾಗಿರುವ ವೇದಾವತಿ ಇವರಿಗೆ ತಾರೇಮಾರ್ ಎಂಬಲ್ಲಿ ರಿಕ್ಷಾ ಅಪಘಾತವಾಗಿದ್ದು ಸೊಂಟಕ್ಕೆ ತ್ರೀವವಾದ ಪೆಟ್ಟಾಗಿದ್ದು ನಡೆದಾಡಲು ಆಗದೆ ಮಲಗಿದ್ದಲ್ಲಿದ್ದಾರೆ. ಬಡಕುಟುಂಬವಾಗಿರುವುದರಿಂದ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ 5 ಲಕ್ಷದ ಅವಶ್ಯಕತೆಯಿದ್ದು ಅವರ ಮನವಿ ನಮಗೆ ಬಂದಿದ್ದು, ಅವರ ಮನವಿಗೆ ಸ್ಪಂದಿಸಿದ ನಮ್ಮ ತಂಡ 20,000/- ಚೆಕ್ ನ್ನು ಹಾಗೂಮಂಗಳೂರು ತಾಲೂಕಿನ ಗುರುಪುರ ಕಿನ್ನಿಮಜಲು ನಿವಾಸಿಯಾಗಿರುವ ಕಸ್ತೂರಿ ಇವರು 6 ತಿಂಗಳಿಂದ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಇದೀಗ ಕ್ಯಾನ್ಸರ್ ಅನ್ನನಾಳ ಹಾಗೂ ಬೆನ್ನು ಮೂಳೆ ಗಳಿಗೆ ಹರಡಿರುವುದರಿಂದ ವೈದರು ಕಿಮೋ ಚಿಕಿತ್ಸೆಯನ್ನು ತೆಗೆದುಕೊಂಡು ಟ್ರಾಸ್ಟ್ ಜುಮಾಚ್ ಎಂಬ ಚಿಕಿತ್ಸೆಯನ್ನು ತೆಗೆದುಕೊಳ್ಳ ಬೇಕೆಂದು ತಿಳಿಸಿದ್ದು.

21 ದಿನಗಳಿಗೊಮ್ಮೆ MIO ಕ್ಯಾನ್ಸರ್ ಸ್ಪೆಷಲಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರಿಗೆ ಗಂಡ ಮಕ್ಕಳು ಇಲ್ಲದ ಕಾರಣ ಅವರು ಅಕ್ಕನ ಮನೆಯಲ್ಲಿ ವಾಸಿಸುತ್ತಿದ್ದೂ, ಇವರ ಚಿಕಿತ್ಸೆಗೆ 7-8 ಲಕ್ಷದ ಅವಶ್ಯಕತೆಯಿದ್ದು ಇವರು ನಮ್ಮ ತಂಡಕ್ಕೆ ಮನವಿ ನೀಡಿದ್ದು ಇವರ ಮನವಿಗೆ ಸ್ಪಂದಿಸಿದ ನಮ್ಮ ತಂಡ ಅವರಿಗೆ 20,000/- ಚೆಕ್ ನ್ನು ಗಂಗಾಧರ್ ಪೂಜಾರಿ, ಗೋಪಾಲ್ ಗೌಡ ಎಡಪದವು, ಸುಬ್ರಮಣ್ಯ ಕೋರ್ಡೆಲ್ ,ಭುಜಂಗ ಕುಲಾಲ್ ಅಧ್ಯಪಾಡಿ, ಚಂದ್ರಕಾಂತ್, ಹರೀಶ್ ಪಿಟ್ಟರ್, ಚಂದ್ರಕಾಂತ್ ಎಡಪದವು ಹಾಗೂ ತಂಡದ ಪದಾಧಿಕಾರಿಗಳು ಸೇವಾ ಮಾಣಿಕ್ಯರು ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತ್ತು
