ವಿದೇಶಗಳಲ್ಲಿಯೂ ಕಂಬಳ ನಡೆಯುವ ದಿನಗಳು ಬರಲಿದೆ – ಬೊಮ್ಮಯಿ

ಶಾಸಕ ಉಮಾನಾಥ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮ, ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುತ್ತಿರುವ 20 ನೇ ವರ್ಷದ ಮೂಡುಬಿದಿರೆಯ ಪ್ರತಿಷ್ಠಿತ ಹೊನಲು ಬೆಳಕಿನ ಕೋಟಿ-ಚೆನ್ನಯ ಕಂಬಳದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಬ್ಬಯಿ ಯವರು ಭಾಗವಹಿಸಿ ಸುಶಾಸನ ದಿನಾಚರಣೆಯ ಅಂಗವಾಗಿ ವಾಜಿಪೇಯಿ ಅವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದರು.

ಗ್ರಾಮೀಣ ಸೊಗಡಿನ ಸಂಸ್ಕೃತಿಯನ್ನು ಬಿಂಬಿಸುವ ಕಂಬಳವು ಕ್ರೀಡೆ ಮಾತ್ರ ಅಲ್ಲ ಅದು ಗ್ರಾಮೀಣ ಬದುಕಿಗೆ ಶಕ್ತಿ ತುಂಬುವ ಕಲೆಯಾಗಿದೆ. ಶೌರ್ಯ, ಶಕ್ತಿ, ಕಲೆ, ಏಕಾಗ್ರತೆ ಇರುವ ಕಂಬಳ ತನ್ನದೇ ಆದ ಛಾಪನ್ನು ಮೂಡಿಸಿದೆ. ಮುಂದೊಂದು ದಿನ ಭಾರತದ ಎಲ್ಲಾ ರಾಜ್ಯಗಳಲ್ಲಿ ಕಂಬಳ ನಡೆಯಲಿದ್ದು, ವಿದೇಶಗಳಲ್ಲಿಯೂ ಕಂಬಳ ನಡೆಯುವ ದಿನಗಳು ಬರಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕಂಬಳ ಸಮಿತಿಯ ವತಿಯಿಂದ ಮುಖ್ಯ ಮಂತ್ರಿ ಅವರನ್ನು ಸನ್ಮಾನಿಸಲಾಯಿತು.ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಸಚಿವರಾದ ಸಿ.ಟಿ.ರವಿಕುಮಾರ್, ನಾರಾಯಣಗೌಡ, ಶಿಕ್ಷಣ ಸಚಿವ ನಾಗೇಶ್, ಜಿಲ್ಲಾಧಿಕಾರಿ ರವಿ ಕುಮಾರ್, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಕೆ., ವಲಯಾರಣ್ಯಾಧಿಕಾರಿ ಹೇಮಗಿರಿ ಅಂಗಡಿ, ಪೊಲೀಸ್ ವರಿಷ್ಠಾಧಿಕಾರಿ, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ, ಭಾಸ್ಕರ್ ಎಸ್.ಕೋಟ್ಯಾನ್ ಈ ಸಂದರ್ಭದಲ್ಲಿದ್ದರು.ಶಾಸಕ ಉಮಾನಾಥ ಕೋಟ್ಯಾನ್ ಸ್ವಾಗತಿಸಿದರು.

Related Posts

Leave a Reply

Your email address will not be published.