ಉಡುಪಿ: ಕೃಷ್ಣ ನಗರಿಯಲ್ಲಿ ಮುಂಜಾನೆ ಮಂಜು ಮುಸುಕಿದ ವಾತಾವರಣ

ಉಡುಪಿ ಜನತೆಗೆ ಬೆಳ್ಳಂಬೆಳಿಗ್ಗೆ ಒಂದೆಡೆ ಶಾಕ್ ಅದ್ರೆ ಮತ್ತೊಂದೆಡೆ ಖುಷಿ ,ಯಾಕೆಂದ್ರೆ ಕೃಷ್ಣ ನಗರಿ ಉಡುಪಿ ಇಂದು ಮುಂಜಾನೆ ಮಂಜಿನ ನಗರಿಯಾಗಿ ಮಾರ್ಪಡಾಗಿತ್ತು.ಮುಂಜಾನೆ ಮನೆಯಿಂದ ಹೊರ ಬಂದ ಜನರಿಗೆ ನಾವು ಉಡುಪಿಯಲ್ಲಿದ್ದೇವೋ..ಅಥವಾ ಮಡಕೇರಿಯಲ್ಲಿದ್ದೇವೋ ಅನ್ನೋ ಕನ್ಪೂಶನ್.ಎಂಟು ಗಂಟೆಯಾದರೂ ನಗರದಲ್ಲಿ ಮಂಜು ಮುಸುಕಿದ ವಾತಾವರಣ ಕಾಣಾಸಿಕ್ಕಿತ್ತು.ಹವಾಮಾನ ವೈಪರಿತ್ಯದಿಂದಲೋ ಗೊತ್ತಿಲ್ಲ ಒಟ್ಟಿನಲ್ಲಿ ಉಡುಪಿ ಜನತೆಯಂತೂ ಇಂದಿನ ಮುಂಜಾನೆ ವಾತವರಣವನ್ನು ಎಂಜಾಯ್ ಮಾಡಿದ್ರು.