HomeFresh Newsಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ - ಶರಣ್ ಪಂಪ್‍ವೆಲ್, ದಿನೇಶ್ ಮೆಂಡನ್ ಮೇಲೆ ಕೇಸ್...

ಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ – ಶರಣ್ ಪಂಪ್‍ವೆಲ್, ದಿನೇಶ್ ಮೆಂಡನ್ ಮೇಲೆ ಕೇಸ್ ದಾಖಲು

ಉಡುಪಿ ವಿಡಿಯೋ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದ ವತಿಯಿಂದ ಉಡುಪಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡಿದ ಶರಣ್ ಪಂಪ್‍ವೆಲ್ ಮತ್ತು ದಿನೇಶ್ ಮೆಂಡನ್ ಮೇಲೆ ಪೊಲೀಸರು ಸುಮೊಟೊ ಕೇಸ್ ದಾಖಲು ಮಾಡಿರುವುದು ಖಂಡನೀಯ ಎಂದು ಬಜರಂಗದಳದ ಪ್ರಾಂತ ಸಂಯೋಜಕ ಸುನಿಲ್ ಕೆ.ಆರ್ ಖಂಡಿಸಿದ್ದಾರೆ.

ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಖಂಡನೆ ವ್ಯಕ್ತಪಡಿಸಿದರು. ಹಿಂದೂ ಸಮಾಜದ ಮೇಲೆ ಆಗುತ್ತಿರುವ ದೌರ್ಜನ್ಯ ದಬ್ಬಾಳಿಕೆ ವಿರುದ್ಧ ಹಿಂದೂ ಸಮಾಜ ಜಾಗೃತರಾಗಬೇಕು ಎಂದು ಹೇಳಿದ ಸಂಘಟನೆಯ ಪ್ರಮುಖರ ಮೇಲೆ ಕೇಸು ಹಾಕಿರುವುದು ಖಂಡನೀಯ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ವಿಭಾಗದ ಸಂಯೋಜಕರಾದ ಭುಜಂಗ ಕುಲಾಲ್, ವಿಷ್ಣುಮೂರ್ತಿ ಆಚಾರ್ಯ, ಚೇತನ್ ಪೆರಾಲ್ಕೆ, ಮನೋಜ್ ಮಲ್ಪೆ ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments