ಆ.5ರಂದು – ಬ್ರಹ್ಮಾವರದಲ್ಲಿ ನೂತನ ನ್ಯಾಯಾಲಯ ಉದ್ಘಾಟನೆ
ಬ್ರಹ್ಮಾವರದಲ್ಲಿ ನೂತನ ತಾಲೂಕು ಕೇಂದ್ರವಾದ ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯವನ್ನು ಆಗಸ್ಟ್ 5ರಂದು ಹೈಕೋರ್ಟ್ ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಬಳಿಕ ಭಂಟರ ಭವನದಲ್ಲಿ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಂ.ಐ ಅರುಣ್ ಅಧ್ಯಕ್ಷತೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ.
ರಾಷ್ಟ್ರೀಯ ಹೆದ್ದಾರಿ 66 ಬಳಿಯ ಹಳೆ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು ನ್ಯಾಯಾಲಯವಾಗಿ ಪರಿವರ್ರ್ತಿಸಲು ಬ್ರಹ್ಮಾವರ ಭಾಗದ ನ್ಯಾಯವಾದಿಗಳ ಶ್ರಮ ಮತ್ತು ಹೋರಾಟಕ್ಕೆ ಸರಕಾರದಿಂದ 87 ಲಕ್ಷ ರೂ ಮಂಜೂರಾಗಿತ್ತು. ಕೋರ್ಟ್ ಕಲಾಪಕ್ಕೆ ಬೇಕಾಗುವ ಸಭಾಂಗಣ, ನ್ಯಾಯಪೀಠ, ನ್ಯಾಯವಾದಿಗಳಿಗೆ, ಶಿರಸ್ತೇದಾರರೀಗೆ, ಸರಕಾರಿ ನ್ಯಾಯವಾದಿಗಳಿಗೆ ಬೇಕಾಗುವ ಕೊಠಡಿಗಳು, ಪಿಠೋಪಕರಣಗಳು ಸಿದ್ಧಗೊಂಡಿದೆ.
ಗುತ್ತಿಗೆದಾರ ನವೀನ್ ಚಂದ್ರ ಶೆಟ್ಟಿಯವರು ಮಾಡಲಾದ ಕಾಮಗಾರಿಯನ್ನು ಲೊಕೋಪಯೋಗಿ ಇಲಾಖೆಯ ಇಂಜಿನಿಯರ್ ವಿನಾಯಕ ಪೂಜಾರ ಮತ್ತು ಗಿರೀಶ್ ಅಂತಿಮ ಪರಿಶೀಲನೆ ಮಾಡಿದರು.