HomeFresh Newsಉಡುಪಿ: ಪ್ರೇತ ಆಹ್ವಾನೆಗೆ ಬೆಚ್ಚಿ ಬಿದ್ದ ಕಾರ್ಮಿಕರು..!

ಉಡುಪಿ: ಪ್ರೇತ ಆಹ್ವಾನೆಗೆ ಬೆಚ್ಚಿ ಬಿದ್ದ ಕಾರ್ಮಿಕರು..!

ಕಾರ್ಮಿಕನ ಮೈಮೇಲೆ ಪ್ರೇತಾತ್ಮದ ಆವೇಶ ಬಂದು ದಾಳಿ ನಡೆಸಿದಾಗ ಸಹೋದ್ಯೋಗಿಗಳ ಎದ್ನೋ ಬಿದ್ನೋ ಎಂದು ಓಡಿದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉದ್ಯಾವರದ ಪಿತ್ರೋಡಿಯಲ್ಲಿ ನಡೆದಿದೆ. ಕಾರ್ಮಿಕರು ದಿಕ್ಕಾಪಾಲಾಗಿ ಓಡಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿತ್ತಿದೆ.

ಮೀನು ಕಟ್ಟಿಂಗ್ ಶೆಡ್‍ನಲ್ಲಿ ಉತ್ತರ ಭಾರತದ 10 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಎಲ್ಲರೂ ಒಂದೇ ರೂಮಿನಲ್ಲಿ ನೆಲೆಸಿದ್ದರು. ಆದರೆ, ತಡರಾತ್ರಿ 11 ರ ವೇಳೆಗೆ ಬಿಹಾರ ಮೂಲದ ಕಾರ್ಮಿಕನ ಮೈಮೇಲೆ ಪ್ರೇತಾತ್ಮದ ಆವೇಶವಾಗಿದೆ. ಪ್ರೇತಾತ್ಮ ಆಹ್ವಾನೆ ಆಗುತ್ತಲೇ ಸಹೋದ್ಯೋಗಿಗಳ ಮೇಲೆ ದಾಳಿ ನಡೆಸಿದ್ದಾನೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ರೂಮ್‍ನಿಂದ ಒಬ್ಬರ ಮೇಲೆ ಒಬ್ಬರು ಬಿದ್ದು ಎದ್ದು ಓಡಿ ಹೋಗಿದ್ದಾರೆ. ಈ ವೇಳೆ ಕೆಲವರಿಗೆ ಗಾಯಗಳಾಗಿವೆ.

ಈ ಬಗ್ಗೆ ದೆವ್ವ ಆಹ್ವಾನೆಗೆ ಒಳಗಾದ ಕಾರ್ಮಿಕನೇ ಹೇಳಿಕೆ ನೀಡಿದ್ದಾರೆ. ನಾವು ಮಾರಿ ಕಟ್ಟೆಯ ಬಳಿ ಬಾಯಲ್ಲಿ ವಿಮಲ್ ಹಾಕಿಕೊಂಡು ಅಲ್ಲಿದ್ದ ಕುರ್ಚಿಯಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದೇವು. ಏಕಾಏಕಿ ನನ್ನ ಸುತ್ತ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತು. ನಾನು ಭಯದಿಂದ ಕೂಗಿ ಕೊಳ್ಳುತ್ತಾ ಓಡಿದೆ ಎಂದರು.

ನನಗೆ ದೆವ್ವ ಹಿಡಿದಂತಾಗಿ ನಾನು ರೂಮಿಗೆ ಓಡಿ ಅಲ್ಲಿ ಕೂಡ ಕೂಗಾಡಿದೆ. ನಾನು ಏನು ಮಾಡುತ್ತಿದ್ದೇನೆ ಎಂದು ನನಗೆ ಅರಿವಿರಲಿಲ್ಲ. ನನ್ನ ಜೊತೆಗಿದ್ದವರು ನನಗೆ ಆಮೇಲೆ ತಿಳಿಸಿದರು. ಮಾರಿಕಟ್ಟಿ ಬಳಿಯಿಂದ ಒಬ್ಬ ವ್ಯಕ್ತಿ ತನ್ನ ಹಿಂದೆ ಇದ್ದ ಎನ್ನುವ ಅನುಭವವಾಗುತ್ತಿತ್ತು. ರೂಮಿನೊಳಗೆ ಹೋದಾಗಲೂ ಇದೇ ರೀತಿ ಆಯಿತು ಎಂದು ತನಗಾದ ಅನುಭವವನ್ನು ಕಾರ್ಮಿಕ ಹೇಳಿಕೊಂಡಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments