ನೇತ್ರ ಜ್ಯೋತಿ ಕಾಲೇಜಿನಲ್ಲಿ ರಾಷ್ಟ್ರೀಯ ಆಪರೇಷನ್ ಥಿಯೇಟರ್ ಮತ್ತು ಅರಿವಳಿಕೆ ದಿನಾಚರಣೆ
ಉಡುಪಿಯ ಪ್ರತಿಷ್ಠಿತ ನೇತ್ರ ಜ್ಯೋತಿ ಇನ್ಸಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಮತ್ತು ಪ್ಯಾರಾಮೆಡಿಕಲ್ ಸೈನ್ಸಸ್ ಕಾಲೇಜಿನಲ್ಲಿ ರಾಷ್ಟ್ರೀಯ ಅಪರೇಷನ್ ಥಿಯೇಟರ್ ಮತ್ತು ಅರಿವಳಿಕೆ ದಿನವನ್ನು ಆಚರಿಸಲಾಯಿತು.
ಈ ದಿನದ ಅಂಗವಾಗಿ ಕಾಲೇಜಿನ ಒಟಿ ಎಟಿ ವಿಭಾಗದ ವತಿಯಿಂದ ಆಯೋಜಿಸಿದ “ಸಂಗಮ 2024” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿಯ ಸಿಟಿ ಆಸ್ಪತ್ರೆಯ ಹಿರಿಯ ಸಮಾಲೋಚಕ, ಶಸ್ತ್ರ ಚಿಕಿತ್ಸಕ ಡಾ. ರಾಮಚಂದ್ರರವರು ವಿದ್ಯಾರ್ಥಿಗಳಿಗೆ ಆಪರೇಷನ್ ಥಿಯೇಟರ್ ನಲ್ಲಿನ ಶಿಸ್ತು ಸನ್ನಡತೆಯ ಬಗ್ಗೆ ತಿಳಿಸಿದರು. ಜೀವನದಲ್ಲಿ ಸೋಲು ಗೆಲುವು ಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಹಾಗೂ ಕಾಲೇಜಿನ ಆಡಳಿತ ನಿರ್ದೇಶಕಿಯಾದ ಶ್ರೀಮತಿ ರಶ್ಮಿ ಕೃಷ್ಣಪ್ರಸಾದ್ ರವರು ಸಾಮಾಜಿಕ ಜವಾಬ್ದಾರಿ ಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.ವೇದಿಕೆಯಲ್ಲಿ ಪ್ರಸಾದ್ ನೇತ್ರಾಲಯದ ಅರಿವಳಿಕೆ ತಜ್ಞರಾದ ಡಾ. ರಾಜಗೋಪಾಲ್ ಭಂಡಾರಿ, ಡಾ. ಗಣಪತಿ ಹೆಗಡೆ, ಕಾಲೇಜಿನ ಸಿಓಓ ಡಾ. ಗೌರಿ ಪ್ರಭು, ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜೀಬ್ ಮಂಡಲ್, ಎಚ್. ಆರ್. ಶ್ರೀಮತಿ ತಾರಾ ಶಶಿಧರ್, ಕಾರ್ಡಿನೇಟರ್ ಸಚಿನ್ ಶೆಟ್ ಮತ್ತು ಓಟಿ ಎಟಿ ಉಪನ್ಯಾಸಕಿ ಕು, ಸ್ವಾತಿ ರಾವ್ ಉಪಸ್ಥಿತರಿದ್ದರು.
ಉಡುಪಿ ಸುತ್ತಲಿನ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ ಅಂತರ ಕಾಲೇಜು ರಸಪ್ರಶ್ನೆ ಹಾಗೂ ವಿಡಿಯೋ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, ರಸಪ್ರಶ್ನೆ ಸ್ಪರ್ಧೆಯಲ್ಲಿ ನೇತ್ರ ಜ್ಯೋತಿ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದರೆ ಕೆ. ಆರ್. ಹೆಗಡೆ ಪ್ಯಾರಾಮೆಡಿಕಲ್ ಕಾಲೇಜು ಕೋಟದ ವಿಧ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿಡಿಯೋ ಸ್ಪರ್ಧೆಯಲ್ಲಿ ನೇತ್ರ ಜ್ಯೋತಿ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಹಾಗೂ ತೃತೀಯ ಸ್ಥಾನವನ್ನು ಉಡುಪಿಯ ವಿದ್ಯಾರತ್ನ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸಿಟಿ ಆಸ್ಪತ್ರೆ ಉಡುಪಿ ಹಾಗೂ ಸ್ಪಂದನ ಆಸ್ಪತ್ರೆ ಕಾರ್ಕಳದ ಆಪರೇಷನ್ ಥಿಯೇಟರ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಮಿತ್ರಾ ನಾಯಕ್ ಹಾಗೂ ಶ್ರೀಮತಿ ಮಲ್ಲಿಕಾ ಸುರೇಂದ್ರ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಕು. ಅರ್ಚನಾ ಎಲ್ಲರನ್ನೂ ಸ್ವಾಗತಿಸಿ ಕು. ಮಂಜುಷಾ ವಂದಿಸಿದರು. ಕುಮಾರಿ ಸುರಕ್ಷಾ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು.