ಉಡುಪಿ : ಗುಜರಿ ಅಂಗಡಿಯಲ್ಲಿ ಭಾರೀ ಅಗ್ನಿ ಅವಘಡ

ಉಡುಪಿ: ಉಡುಪಿ ನಗರದ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಸಮೀಪದ ಗುಜರಿ ಅಂಗಡಿಯೊಂದರಲ್ಲಿ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ತಡರಾತ್ರಿ ಸುಮಾರು 12 ಗಂಟೆ ಹೊತ್ತಿಗೆ ಬೆಂಕಿ ಹೊತ್ತಿಕೊಂಡಿದ್ದು ತಕ್ಷಣ ಉಡುಪಿ ಮತ್ತು ಮಲ್ಪೆಯ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.ಅಂಗಡಿಯಲ್ಲಿ ಬೃಹತ್ ಪ್ರಮಾಣದ ಪ್ಲಾಸ್ಟಿಕ್ ದಾಸ್ತಾನು ಮತ್ತು ಕಚ್ಚಾ ವಸ್ತುಗಳಿದ್ದವು. ಪ್ಲಾಸ್ಟಿಕ್ ಜೊತೆಗೆ ಗುಜರಿ ಸಾಮಾನುಗಳು, ಕಚ್ಚಾ ತೈಲಗಳು ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆಗೆ ತುತ್ತಾದವು. ಸಮೀಪದಲ್ಲೇ ಹಲವು ಮನೆಗಳಿರುವ ಈ ಪ್ರದೇಶದಲ್ಲಿ ವಾಹನಗಳನ್ನೂ ನಿಲ್ಲಿಸಲಾಗಿತ್ತು. ಅಗ್ನಿಶಾಮಕ ಸಿಬ್ಬಂದಿಯ ಸಕಾಲದ ಕಾರ್ಯಾಚರಣೆಯಿಂದಾಗಿ ಭಾರೀ ಅವಘಡ ತಪ್ಪಿದೆ. ತಡರಾತ್ರಿ ಹೊತ್ತಿಕೊಂಡ ಬೆಂಕಿ ಮುಂಜಾನೆ ಹೊತ್ತಿಗೆ ನಿಯಂತ್ರಣಕ್ಕೆ ಬಂತು ಎಂದು ಸ್ಥಳೀಯರು ತಿಳಿಸಿದ್ದಾರೆ.

Related Posts

Leave a Reply

Your email address will not be published.