ರಸ್ತೆ ಕಾಮಗಾರಿಗೆ ಊರಿನ ಜನ ಸಹಕರಿಸಿರಿ, ಗೊಂದಲಗಳಿದ್ದರೆ ಇಂಜಿನಿಯರನ್ನು ಸಂಪರ್ಕಿಸಿ : ಖಾದರ್ ಹೇಳಿಕೆ

ಉಳ್ಳಾಲ: ಇವತ್ತು ನಾವು ಇರಬಹುದು, ನಾಳೆ ಇಲ್ಲವಾಗಿರಬಹುದು. ಇದು ಊರವರ ರಸ್ತೆ, ಕಾಮಗಾರಿ ವೇಳೆ ಎಲ್ಲರೂ ಸಹಕರಿಸಿ ಗೊಂದಲಗಳಿದ್ದರೆ ಇಂಜಿನಿಯರನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳಿ ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ ಹೇಳಿದರು.

ಅವರು ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೀರಿ ಜಂಕ್ಷನ್ನಿನಿಂದ ಉಚ್ಚಿಲ ಬೀಚ್ ಸಂಪರ್ಕಿಸುವ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯ ಶಿಲನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ವಾಣಿಜ್ಯ, ವಸತಿ, ಶಾಲೆಗೆ ಸೇರಿದ ಅನೇಕ ಕಟ್ಟಡಗಳು ಪ್ರದೇಶದಲ್ಲಿದ್ದು, ವಿವಿದೆಡೆ ಸಂಪರ್ಕಿಸುವ ರಸ್ತೆಯನ್ನು ಪ್ರದೇಶ ಒಳಗೊಂಡಿದೆ. ಈ ಭಾಗದ ಅಭಿವೃದ್ಧಿಗೆ ಪೂರಕವಾಗಿ ಬೀಚ್‍ಗೆ ಸಂಪರ್ಕಿಸುವ ರಸ್ತೆಯ ಡಾಮರೀಕರಣ ಹಿಂದೆ ಆಗಿತ್ತು. ಇದೀಗ ಕಾಂಕ್ರೀಟಿಕರಣಕ್ಕೆ ಚಾಲನೆ ನೀಡಲಾಗಿದೆ. ರೂ. 10 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಬೇಕಾಗಿದ್ದ ರಸ್ತೆ ಊರವರ ಬೇಡಿಕೆಯಂತೆ ಅಗಲೀಕರಣದ ಪ್ರಸ್ತಾಪವನ್ನು ಪಡೆದುಕೊಂಡು ಹೆಚ್ಚುವರಿ ರೂ.5 ಲಕ್ಷ ವನ್ನು ಇಡಲಾಗುತ್ತಿದೆ. ಮತ್ತೆ ಹೆಚ್ಚುವರಿ ಅನುದಾನ ಬೇಕಿದ್ದಲ್ಲಿ ಪ್ರಯತ್ನಿಸಲಾಗುವುದು ಎಂದ ಅವರು ಇವತ್ತು ನಾನು ಇರಬಹುದು, ನಾಳೆ ಇಲ್ಲದಿರಬಹುದು. ಊರಿನ ಜನ ರಸ್ತೆಯನ್ನು ಅವರ ರಸ್ತೆಯೆಂದು ಭಾವಿಸಿ ಕಾಮಗಾರಿಗಳಲ್ಲಿ ನಡೆಯುವ ಗೊಂದಲಗಳನ್ನು ಬಗೆಹರಿಸಿ ಮುಂದುವರಿಯಿರಿ ಎಂದರು.

ಕೋಟೆಕಾರು ಬ್ಯಾಂಕ್ ಅಧ್ಯಕ್ಷ ಕೃಷ್ಣ ಶೆಟ್ಟಿ ಕೋಟೆಕಾರುಗುತ್ತು ಶಿಲನ್ಯಾಸ ನೆರವೇರಿಸಿದರು. ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಾಜಿ ಅಧ್ಯಕ್ಷ ಹರ್ಷರಾಜ್ ಮುದ್ಯ, ಡಿಸಿಸಿ ಸದಸ್ಯ ಸುರೇಶ್ ಭಟ್ನಗರ, ತಾ.ಪಂ ಮಾಜಿ ಸದಸ್ಯೆ ಸುರೇಖಾ ಚಂದ್ರಹಾಸ್, ಕ್ಷೇತ್ರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ, ಪ್ರಭಾವತಿ, ಸಫಿಯಾ, ಕಲಾವತಿ, ಬಶೀರ್ ಮುಂಡೋಳಿ, ರಾಮಾಚಾರಿ, ದೀಪಕ್ ಪಿಲಾರ್, ರಾಘವ ಉಚ್ಚಿಲ್, ಸುಕುಮಾರ್ ಗಟ್ಟಿ, ಮೊಯ್ದೀನ್ ಬಾವ ಕೋಟೆಕಾರು, ಇಸ್ಮಾಯಿಲ್ ತಲಪಾಡಿ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.