HomeFresh Newsಉಡುಪಿ: ಜೂಬ್ಲಿಯೆಂಟ್ ಮೋಟಾರ್‌ವರ್ಕ್ಸ್‌ನಲ್ಲಿ ನೂತನ ವಿಂಡ್ಸರ್ ಇವಿ ಪ್ರೋ ಕಾರನ್ನು ಲೋಕಾರ್ಪಣೆ

ಉಡುಪಿ: ಜೂಬ್ಲಿಯೆಂಟ್ ಮೋಟಾರ್‌ವರ್ಕ್ಸ್‌ನಲ್ಲಿ ನೂತನ ವಿಂಡ್ಸರ್ ಇವಿ ಪ್ರೋ ಕಾರನ್ನು ಲೋಕಾರ್ಪಣೆ

ನೂತನ ವಿಂಡ್ಸರ್ ಇವಿ ಪ್ರೋ ಕಾರನ್ನು ಗಣ್ಯರು ಮಾರುಕಟ್ಟೆಗೆ ಲೋಕಾರ್ಪಣೆ ಮಾಡಿದರು.

ಈ ಹೊಸ ’ವಿಂಡ್ಸರ್ ಇವಿ ಪ್ರೊ’ ನಲ್ಲಿ, ಗ್ರಾಹಕರು ಬಿಗ್ ಬ್ಯಾಟರಿ ಮತ್ತು ಲಾಂಗ್ ರೇಂಜ್ ಅನ್ನು ಪಡೆಯುತ್ತಾರೆ. ಈ ಹೊಸ ಇವಿ ಬ್ಯಾಟರಿಯು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 449 ಕಿ.ಮೀ ವರೆಗೆ ಪ್ರಯಾಣಿಸಬಹುದು.

ಒಉ ಈ ಹೊಸ ಕಾರನ್ನು ಹಲವು ವಿಶಿಷ್ಟ, ಅಪ್‌ಡೇಟ್ಡ್ ಫೀಚರ್ಸ್‌ಗಳೊಂದಿಗೆ ಬಿಡುಗಡೆ ಮಾಡಿದೆ. ಸಾಮಾನ್ಯ ವಿಂಡ್ಸರ್‌ಗೆ ಹೋಲಿಸಿದರೆ ಇದು ಹಲವು ಹೊಸ, ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಕೆಲವು ಪ್ರಮುಖ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಲೆವೆಲ್ ೨ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್‌ನೊಂದಿಗೆ ಬರುತ್ತದೆ. ಇದು ೩ ಹಂತದ ಎಚ್ಚರಿಕೆಗಳೊಂದಿಗೆ 12 ಪ್ರಮುಖ ವೈಶಿಷ್ಟ್ಯಗಳನ್ನು ನೀಡುತ್ತದೆ.

ಟ್ರಾಫಿಕ್ ಜಾಮ್ ಅಸಿಸ್ಟ್, ವೆಹಿಕಲ್ ಸೇಫ್ ಸ್ಟಾಪ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬೆಂಡ್ ಕ್ರೂಸ್ ಅಸಿಸ್ಟೆನ್ಸ್, ಲೇನ್ ಡಿಪಾರ್ಚರ್ ವಾರ್ನಿಂಗ್, ಲೇನ್ ಡಿಪಾರ್ಚರ್ ಪ್ರಿವೆನ್ಷನ್, ಲೇನ್ ಕೀಪ್ ಅಸಿಸ್ಟ್, ಇಂಟಿಲಿಜೆಂಟ್ ಹೆಡ್‌ಲ್ಯಾಂಪ್ ಕಂಟ್ರೋಲ್, ಫಾರ್ವಡ್ ಕೊಲ್ಲಿಜನ್ ವಾರ್ನಿಂಗ್, ಆಟೋಮೆಟಿಕ್ ಎಮೆರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್, ಇಂಟಿಲಿಜೆಂಟ್ ಹೈಡ್ರಾಲಿಕ್ ಬ್ರೇಕಿಂಗ್ ಅಸಿಸ್ಟನ್ಸ್

ಹಾಗೂ ಈ ಕಾರಿನ ಅತ್ಯಂತ ವಿಶಿಷ್ಟವಾದ ವಿಷಯವೆಂದರೆ ಅದರ ಬಿಗ್‌ಬ್ಯಾಟರಿ. ಇದರ ಹಳೆಯ ರೂಪಾಂತರವು 38kWh ಬ್ಯಾಟರಿಯನ್ನು ಹೊಂದಿದೆ. ಆದರೆ ಈಗ ಈ ಹೊಸ ವಿಂಡ್ಸರ್ ಇವಿ ಪ್ರೊ 52.9kWh ಬ್ಯಾಟರಿಯನ್ನು ಹೊಂದಿದೆ. ಆದರೂ ಅದರ ಪವರ್ ಔಟ್‌ಪುಟ್‌ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಕಾರು 134 ಬಿಎಚ್‌ಪಿ ಪವರ್ ಮತ್ತು 200 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಕಾರಿನಲ್ಲಿ V2L ಮತ್ತುV2V ತಂತ್ರಜ್ಞಾನವನ್ನು ಸಹ ಸೇರಿಸಲಾಗಿದೆ. ಈ ತಂತ್ರಜ್ಞಾನದ ಸಹಾಯದಿಂದ ನೀವು ಇತರ ವಾಹನಗಳು ಅಥವಾ ಸಾಧನಗಳನ್ನು ಚಾರ್ಜ್ ಮಾಡಬಹುದು. ಈ ಕಾರು ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್ಸ್, ಫಾಕ್ಸ್‌ವುಡ್ ಇನ್‌ಸ್ಟರ್ಸ್ ಮತ್ತು ನ್ಯೂ ಅಪ್‌ಹೋಲ್ಸ್ಟರಿ ಸಹ ಒಳಗೊಂಡಿದೆ. ಇದರೊಂದಿಗೆ ಈ ಕಾರು ಪವರ್ಡ್ ಟೈಲ್‌ಗೇಟ್ ವೈಶಿಷ್ಟ್ಯವನ್ನು ಸಹ ಹೊಂದಿದೆ.

add - Anchan ayurvedic
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments