ಉಡುಪಿ ದಿವ್ಯಾಂಗರಿಂದ ಗಾಲಿಕುರ್ಚಿ ಜಾಥಾ

ಸೇವಾಭಾರತಿ (ರಿ.) ಬೆಳ್ತಂಗಡಿ ಮತ್ತು ದಿವ್ಯಾಂಗ ರಕ್ಷಣಾ ಸಮಿತಿ, ಕೊಡವೂರು ಇವರ ಜಂಟಿ ಸಹಯೋಗದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಸೆಪ್ಟೆಂಬರ್ 08, 2022 ರ ಗುರುವಾರದಂದು, ಉಡುಪಿಯ ದಿವ್ಯಾಂಗರಿಂದ ಉಡುಪಿ ಗಾಂಧಿ ಸರ್ಕಲ್‍ನಿಂದ ಪುರಭವನದ ವರೆಗೆ ಗಾಲಿಕುರ್ಚಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ದಿವ್ಯಾಂಗರು ತಮ್ಮ ವೀಲ್ ಚೇರ್ ಬಳಸಿ ವಿಭಿನ್ನವಾದ ಸ್ಟಂಟ್‍ಗಳನ್ನು ಮಾಡಿ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಿದರು. ಈ ಜಾಥಾದಲ್ಲಿ ವೀಲ್‍ಚೇರ್ ಮೂಲಕ ಸಾಗುತ್ತಿರುವ ದಿವ್ಯಾಂಗರಿಗೆಂದೇ, ಕುಡಿಯಲು ನೀರು ಮತ್ತು ತಂಪು ಪಾನೀಯ ಹಾಗೂ ದಿವ್ಯಾಂಗರಿಗೆ ಹೂವನ್ನು ಚೆಲ್ಲಿ ಈ ಕಾರ್ಯಕ್ರಮಕ್ಕೆ ಬೆಂಬಲವನ್ನು ಸೂಚಿಸಿ ಮಾತನಾಡಿದ ಹೋಟೆಲ್ ಪಂಚರತ್ನ ಪ್ಯಾರಾಡೈಸ್ ನ ಮಾಲಕರಾದ ಸಂತೋಷ್ ಶೆಟ್ಟಿಯವರು ಕೊಡವೂರು ವಾರ್ಡ್ ನ ಕೌಂಸೆಲರಾದ ವಿಜಯ್ ಕೊಡವೂರು ಅವರ ಕಾರ್ಯ ವೈಖರಿಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.

14 ವರ್ಷಗಳ ಹಿಂದೆ ಬೆನ್ನುಹುರಿ ಅಪಘಾತಕ್ಕೆ ಒಳಗಾಗಿ, 8 ವರ್ಷಗಳ ಕಾಲ ಹಾಸಿಗೆಯಲ್ಲೇ ಇದ್ದು, ಸೇವಾಧಾಮದ ಪುನಶ್ಚೇತನ ಕಾರ್ಯದಿಂದ ಇದೀಗ ತಮ್ಮ ಜೀವನದಲ್ಲಿ ಮತ್ತೊಮ್ಮೆ ಸಂತೋಷವನ್ನು ಕಾಣುತ್ತಿರುವ ಹಾಗೂ ಸೇವಾಧಾಮದ ನಿರ್ದೇಶಕರಾದ ರಯಾನ್ ಫೆರ್ನಾಂಡಿಸ್ ಅವರು ಮಾತನಾಡಿ ತಮ್ಮ ಅನುಭವವನ್ನು ಹಂಚಿಕೊಂಡರು.

ಇದರ ಸಭಾ ಕಾರ್ಯಕ್ರಮದಲ್ಲಿ ಸೇವಭಾರತಿಯ ಅಧ್ಯಕ್ಷರಾದ ವಿನಾಯಕ ರಾವ್, ಹೋಟೆಲ್ ಪಂಚರತ್ನ ಪ್ಯಾರಾಡೈಸ್ ಮಾಲಕರಾದ ಸಂತೋಷ್ ಶೆಟ್ಟಿ, ತೋನ್ಸೆ ಪಾರ್ ರೆಸ್ಟೋರೆಂಟ್‍ನ ಮಾಲಕರಾದ ಚಂದ್ರಕಾಂತ್ ದೇವಾಡಿಗ, ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ದಿನಕರ ಶೆಟ್ಟಿ, ಸೇವಧಾಮ ನಿರ್ದೇಶಕರಾದ ರಯಾನ್ ಫೆರ್ನಾಂಡಿಸ್, ಉಡುಪಿ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು, ಕೊಡವೂರು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾದ ನಾರಾಯಣ ಬಲ್ಲಾಳ್, ಕೊಡವೂರು ಅಭಿವೃದ್ಧಿ ಸಮಿತಿಯ ಅಶೋಕ್ ಶೆಟ್ಟಿಗಾರ್, ನಾಗೇಂದ್ರ ಕುಮಾರ್, ಉಡುಪಿ ನಗರಸಭಾ ಸದಸ್ಯರಾದ ಟಿ.ಜಿ. ಹೆಗ್ಡೆ, ಉಪಸ್ಥಿತರಿದ್ದರು.

Related Posts

Leave a Reply

Your email address will not be published.