HomeFresh Newsಉದ್ಯಾವರ : ಬೆಳ್ಳಂಬೆಳಗ್ಗೆ ವಾಶ್ ರೂಂ ಗೆ ಹೋದ ಯುವತಿ ನಾಪತ್ತೆ

ಉದ್ಯಾವರ : ಬೆಳ್ಳಂಬೆಳಗ್ಗೆ ವಾಶ್ ರೂಂ ಗೆ ಹೋದ ಯುವತಿ ನಾಪತ್ತೆ

ಮೊಬೈಲ್ ಶಾಪ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಉದ್ಯಾವರ ಸಂಪಿಗೆನಗರ ಮಸೀದಿ ಬಳಿಯ ಯುವತಿಯೋರ್ವಳು ರಾತೋ ರಾತ್ರಿ ಮನೆಯಿಂದ ನಾಪತ್ತೆಯಾದ ಘಟನೆ ಆ. 23 ರಂದು ನಡೆದಿದೆ. ನೇತ್ರಾವತಿ (20) ಕಾಣೆಯಾಗಿರುವ ಯುವತಿ. ಕಳೆದ ಮೂರು ತಿಂಗಳಿನಿಂದ ಉದ್ಯಾವರದ ಸ್ಮಾರ್ಟ್ ಮೊಬೈಲ್ ಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದ ನೇತ್ರಾವತಿ ಅವರು ಆ. 22 ರಂದು ರಾತ್ರಿ ಊಟ ಮಾಡಿ ಮಲಗಿದ್ದು ಆ. 23 ರಂದು ಬೆಳಗ್ಗೆ 5.30 ಕ್ಕೆ ಹಾಲ್ ನಿಂದ ಎದ್ದು ವಾಶ್ ರೂಂ ಗೆ ಹೋಗಿದ್ದು, ಅಲ್ಲಿಂದ ಮರಳದೇ ಮನೆಯೊಳಗಿನಿಂದಲೇ ಕಾಣೆಯಾಗಿದ್ದಳು. ಮನೆಯವರೆಲ್ಲರೂ ಸೇರಿ ಅಕ್ಕಪಕ್ಕದವರ ಮನೆಗಳಲ್ಲಿ ಸಂಬಂಧಿಕರ ಮನೆಗಳಲ್ಲಿ ಪರಿಚಯದವರಲ್ಲಿ ವಿಚಾರಿಸಿದ್ದು ಈವರೆಗೂ ಪತ್ತೆಯಾಗಿರುವುದಿಲ್ಲ ಎಂದು ಅವರ ಅಕ್ಕ ವಿಜಯಲಕ್ಷ್ಮೀ ಅವರು ಕಾಪು ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments