ಸೌಹಾರ್ದ ಲಹರಿ : ನೂತನ ಪದಾಧಿಕಾರಿಗಳ ಉದ್ಘಾಟನ ಸಮಾರಂಭ

ಸೌಹಾರ್ದ ಲಹರಿಯ ನೂತನ ಪದಾಧಿಕಾರಿಗಳ ಉದ್ಘಾಟನ ಸಮಾರಂಭವು ಮಾರ್ಕೊ ಪೋಲೊ ಹೋಟೆಲ್ನಲ್ಲಿ ವಿಜೃಂಭಣೆಯಿಂದ ನಡೆಯಿತು. ಸಂಘದ ಗೌರವ ಅಧ್ಯಕ್ಷರು ಶ್ರೀ ದಿನೇಶ್ ಸಿ ದೇವಾಡಿಗ ನೂತನ ಪದಾಧಿಕಾರಿಗಳಿಗೆ ಶುಭಾಶಯ ನೀಡಿದರು.

ಸಂಘದ ಗೌರವ ಸಲಹೆಗಾರ ಶ್ರೀ ದಯಾ ಕಿರೋಡಿಯನ್ ಸಂಘದ ನಿರ್ಮಾಣ ಮತ್ತೆ ಸಂಘದ ಪೌಂಡರ್ ಸದಾಶಿವ ದಾಸ್ ಅವರ ಬಗ್ಗೆ ಮಾತಾಡಿ ಸಂಘದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದರು. ಸಂಘದ ನಿಕಟ ಪೂರ್ವ ಅಧ್ಯಕ್ಷರು ಶ್ರೀ ಅಶೋಕ್ ಅಂಚನ್, ಶ್ರೀ ರಿಚರ್ಡ್, ಶ್ರೀ ಹನೀಫ್ ಪೆರ್ಲಿಯ ಇವರ ಅನುಪ ಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.

ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಶ್ರೀ ಅಶೋಕ್ ಬೈಲೂರ್, ಉಪಾಧ್ಯಕ್ಷ ಶ್ರೀ ಕರುಣಾಕರ ಆಡ್ಯಾರು, ಕಾರ್ಯದರ್ಶಿ ಶ್ರೀ ಯುವರಾಜ್ ಕೆ ದೇವಾಡಿಗ, ಖಜಾಂಚಿ ಶ್ರೀ ಸುರೇಶ ಏನ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಯಶವಂತ ಕರ್ಕೆರ ಇವರೆಲ್ಲರಿಗೂ ಪುಷ್ಪಗುಚ್ಚ ನೀಡಿ ಗೌರವಿಸಲಾಯಿತು. ಮನರಂಜನೆ ಕಾರ್ಯಕ್ರಮ ದಲ್ಲಿ ಸಂಘದ ಸದಸ್ಯರಾದ ಶ್ರೀಮತಿ ಸುಕನ್ಯಾ ಶರತ್ ಕರ್ಕೇರ , ಶ್ರೀ ಪ್ರಮೋದ್ ದೇವಾಡಿಗ, ಶ್ರೀ ರಾಮಚಂದ್ರ ಬೆದ್ರಡ್ಕ, ಶ್ರೀ ದಿನೇಶ್ ದೊಡ್ಡಣ್ಣಗುಡ್ಡೆ, ಶ್ರೀ ರಜನೀಶ್ ಅಮೀನ್, ಮಾಸ್ಟರ್ ಮಾಯಾಂಕ್ ಮಹೇಶ್ ಅತ್ತಾವರ, ಮಾಸ್ಟರ್ ಸಮ್ಯಕ್ ಸುರೇಶ ಶೆಟ್ಟಿ, ಮಾಸ್ಟರ್ ಸಮರ್ಥ್ ಸುರೇಶ್ ಶೆಟ್ಟಿ, ಮಾಸ್ಟರ್ ವಿಹಾನ್, ಶ್ರೀಮತಿ ಸುಷ್ಮ ಅಶೋಕ್ ಬೈಲೂರು , ಶ್ರೀಮತಿ ಸುಕೇತ, ಶ್ರೀ ಸಂದೀಪ್ ಪೂಜಾರಿ, ಶ್ರೀ ಸುಂದರ್ ರಾವ್, ಶ್ರೀಮತಿ ಮಮತಾ, ಕುಮಾರಿ ಅನನ್ಯ, ಕುಮಾರಿ ಶರಣ್ಯ ಭಾಗಿಯಾಗಿ ಎಲ್ಲರ ಮನಸೆಳೆದರು. ಗಣ್ಯ ಅತಿಥಿಗಳಾದ ಶ್ರೀ ನವೀದ್ ಮಾಗು0ಡಿ ಶ್ರೀ ದಿನೇಶ್ ದೇವಾಡಿಗ ಶ್ರೀ ಸದಾನ್ ದಾಸ್, ಶ್ರೀ ಸುರೇಶ ಚಂದಪ್ಪ ದೇವಾಡಿಗ, ಶ್ರೀ ಆನಂದ ವಲಾಲ್, ಶ್ರೀ ಸೋಧನ್ ಪ್ರಸಾದ್ ಇವರಿಗೆ ಪುಷ್ಪ ನೀಡಿ ಗೌರವಿಸಲಾಯಿತು. ಕಾರ್ಯಕ್ರಮ ದಲ್ಲಿ ಇ-ಮಣ್ಣು ಚಿತ್ರ ತಂಡದ ಸದಸ್ಯರು ಭಾಗವಹಿಸಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು. ಶ್ರೀ ಸುರೇಶ ಎನ್ ಶೆಟ್ಟಿ ಮತ್ತು ಶ್ರೀ ಮಹೇಶ್ ಅತ್ತಾವರ ಕಾರ್ಯಕ್ರಮದ ನಿರೂಪಣೆ ಮಾಡಿದರು.

Related Posts

Leave a Reply

Your email address will not be published.