ಉಳ್ಳಾಲ : ಮರ ಉರುಳಿ ಮನೆ ಛಾವಣಿಗೆ ಅಪಾರ ಹಾನಿ

ಉಳ್ಳಾಲ: ನಿನ್ನೆ ಸುರಿದ ಭಾರೀ ಗಾಳಿ ಮಳೆಗೆ ಇಲ್ಲಿನ ಬಸ್ತಿಪಡ್ಪು ಎಂಬಲ್ಲಿ ಮನೆ ಆವರಣದಲ್ಲಿದ್ದ ತೆಂಗಿನ ಮರ ಉರುಳಿಬಿದ್ದು ಮನೆಗೆ ಹಾನಿಯುಂಟಾಗಿದೆ.


ಬಸ್ತಿಪಡ್ಪುವಿನಲ್ಲಿರುವ ಯು.ಪಿ ಮಲ್ಯ ರಸ್ತೆಯಲ್ಲಿರುವ ವಿಶ್ವನಾಥ್ ತೇವುಲ ಎಂಬವರಿಗೆ ಸೇರಿದ ಮನೆಗೆ ಹಾನಿಯುಂಟಾಗಿದೆ.


ಬುಧವಾರ ಸಂಜೆಯಿಂದ ಭಾರೀ ಮಳೆಯಾಗಿದ್ದು, ಜೋರಾಗಿ ಬೀಸಿದ ಗಾಳಿಯಿಂದ ಆವಾಂತರ ಉಂಟಾಗಿದೆ. ಮನೆಯೊಳಗೆ ಮನೆಮಂದಿಯಿದ್ದರೂ ಯಾವುದೇ ಜೀವಹಾನಿಯಿಲ್ಲದೇ ಪಾರಾಗಿದ್ದಾರೆ. ಮರ ನೇರವಾಗಿ ಛಾವಣಿ ಮೇಲೆ ಬಿದ್ದ ಪರಿಣಾಮವಾಗಿ ಛಾವಣಿ ಸಂಪೂರ್ಣ ಹಾನಿಯುಂಟಾಗಿದ್ದು, ಲಕ್ಷಾಂತರ ನಷ್ಟ ಉಂಟಾಗಿದೆ. ಈ ಕುರಿತು ಮನೆ ಮಾಲೀಕ ವಿಶ್ವನಾಥ್ ತೇವುಲ ಉಳ್ಳಾಲ ನಗರಸಭೆಗೆ ದೂರು ನೀಡಿದ್ದಾರೆ.
