ತೊಕ್ಕೊಟ್ಟು : ಲಾರಿಯಿಂದ ಕೆಳಗೆ ಬಿದ್ದ ಪೈಪುಗಳು : ತಪ್ಪಿದ ಅನಾಹುತ

ಉಳ್ಳಾಲ: ತೊಕ್ಕೊಟ್ಟು ಫ್ಲೈಓವರ್ ಮೇಲೆ ಪೈಪ್ ಹೇರಿಕೊಂಡು ತೆರಳುತ್ತಿದ್ದ ಲಾರಿಯಿಂದ ಪೈಪುಗಳು ಕೆಳಗೆ ರಸ್ತೆಗೆ ಉರುಳಿ ಸಂಭಾವ್ಯ ಅನಾಹುತ ತಪ್ಪಿದೆ.ನೀರು ಸರಬರಾಜು ಮಾಡುವ ಹಳೇ ಪೈಪ್ ಗಳನ್ನು ನವಯುಗ ಸಂಸ್ಥೆಯವರು ಗೋರಿಗುಡ್ಡೆಯಿಂದ ತಲಪಾಡಿ ಟೋಲ್ ಬಳಿ ದಾಸ್ತಾನು ಇಡಲು ತೆರಳುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ.

ullala

ತೊಕ್ಕೊಟ್ಟು ಫ್ಲೈಓವರ್ ಮೇಲೆ ಲಾರಿ ತೆರಳುವ ಸಂದರ್ಭ , ಪೈಪ್ ಗಳನ್ನು ಕಟ್ಟಲಾಗಿದ್ದ ವಸ್ತು ತುಂಡಾಗಿ ಲಾರಿಯಿಂದ ಪೈಪುಗಳು ರಸ್ತೆಗೆ ಉರಳಿದೆ. ಭಾನುವಾರದ ಸಂಜೆ ಸಮಯವಾಗಿದ್ದರಿಂದ ಮತ್ತು ರಂಝಾನ್ ಉಪವಾಸದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನ ಸಂಚಾರಗಳು ಇರದೆ ಸಂಭಾವ್ಯ ಅನಾಹುತ ತಪ್ಪಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರ ನೇತೃತ್ವದಲ್ಲಿ ನವಯುಗ ಸಂಸ್ಥೆ ಸೇರಿಕೊಂಡು ರಾ.ಹೆ.ಯ ಫ್ಲೈಓವರಿನಲ್ಲಿ ಉರುಳಿದ್ದ ಪೈಪ್ ಗಳ ತೆರವು ಕಾರ್ಯಾಚರಣೆ ನಡೆಸಿತು.

Related Posts

Leave a Reply

Your email address will not be published.