HomeFresh NewsV4 ನ್ಯೂಸ್ ವರದಿಗಾರ ಕೆ.ಎಂ. ಖಲೀಲ್‌ ಅವರಿಗೆ  'ಮಾಧ್ಯಮ ರತ್ನ ಪ್ರಶಸ್ತಿ’

V4 ನ್ಯೂಸ್ ವರದಿಗಾರ ಕೆ.ಎಂ. ಖಲೀಲ್‌ ಅವರಿಗೆ  ‘ಮಾಧ್ಯಮ ರತ್ನ ಪ್ರಶಸ್ತಿ’

ಮಾಧ್ಯಮ ಕ್ಷೇತ್ರದಲ್ಲಿ ವಿಶೇಷ ಸಾಧನೆಗಾಗಿ ವಿ4 ನ್ಯೂಸ್‌ನ ವರದಿಗಾರ ಕೆ.ಎಂ. ಖಲೀಲ್ ಅವರು ಮಾಧ್ಯಮ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕವಿತಾ ಮೀಡಿಯಾ ಸೋರ್‍ಸ್ ಪ್ರೈವೆಟ್ ಲಿಮಿಟೆಡ್ ಹೈಬ್ರೀಡ್ ನ್ಯೂಸ್ ಕನ್ನಡ ಸುದ್ದಿವಾಹಿನಿ ವತಿಯಿಂದ ಏ.27ರಂದು ಕೊಪ್ಪಳದಲ್ಲಿ ಕರುನಾಡ ಸಂಭ್ರಮ ಕಿರು ಚಿತ್ರೋತ್ಸವ ಸೀಸನ್-02ರಲ್ಲಿ ನಾಡು, ನುಡಿ, ಸಂಸ್ಕೃತಿಕ ಝೇಂಕಾರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸುಮಾರು 20 ವರ್ಷಗಳಿಂದ ಮಂಗಳೂರಿನ ಪ್ರತಿಷ್ಠಿತ ಸುದ್ದಿ ವಾಹಿನಿಯಾದ ವಿ4 ಮಾಧ್ಯಮದಲ್ಲಿ ತಾಲೂಕು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದು, ವೃತ್ತಿಯಲ್ಲಿ ಛಾಯಾಗ್ರಾಹಕನಾಗಿ 40ವರ್ಷದಿಂದ ದುಡಿಯುತ್ತಿದ್ದಾರೆ. ಶಿಕ್ಷಣಕ್ಕೆ ಒತ್ತು ಕೊಡುವ ಸಂಸ್ಥೆಯಾದ ಜಮಯತುಲ್ ಫಲಹ ಕಾರ್ಕಳ ಘಟಕದಲ್ಲಿ ಪತ್ರಿಕಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, 24.11.2021ರಲ್ಲಿ ಗ್ರಾಮ ಸಾಹಿತ್ಯ ಸಮ್ಮೇಳನದಲ್ಲಿ ಆದಿ ಗ್ರಾಮೋತ್ಸವ ಯುವ ಸಿರಿ ಪ್ರಶಸ್ತಿ, 25.06.2022 ರಲ್ಲಿ ಕರ್ನಾಟಕ ಸಾಧನ ರತ್ನ ಪ್ರಶಸ್ತಿ, ಹಾಗೂ 23.7.2023  ರಂದು ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಕರುನಾಡ ರತ್ನ ಪ್ರಶಸ್ತಿ ಪಡೆದಿದ್ದು ಇದೇ ಬರುವ ಭಾನುವಾರ 27.4.25ರಂದು ಜರಗುವ ಹೈಬ್ರಿಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ ಕೊಪ್ಪಳದಲ್ಲಿ ಇವರ ವತಿಯಿಂದ ನೀಡಲ್ಪಡುವ ಕರುನಾಡು ಸಂಭ್ರಮ ಸಮಾರಂಭದಲ್ಲಿ ಮಾಧ್ಯಮ ರತ್ನ ಪ್ರಶಸ್ತಿಯನ್ನು ಪಡೆಯಲು ಆಯ್ಕೆಯಾಗಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments