ವಿಟ್ಲ: ಹಾಳೆ ತಟ್ಟೆ ಕಾರ್ಖಾನೆಯಲ್ಲಿ ಬೆಂಕಿ: ಲಕ್ಷಾಂತರ ರೂ. ನಷ್ಟ

ವಿಟ್ಲ ಪಡ್ನೂರು ಗ್ರಾಮದ ಬಲಿಪಗುಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಳೆ ತಟ್ಟೆ ತಯಾರಿಕಾ ಘಟಕ ಇಕೋ ವಿಶನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

ಕಟ್ಟಡದ ಮೇಲ್ಭಾಗದಲ್ಲಿ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಫ್ಯಾಕ್ಟರಿ ಯಿಂದ ದಟ್ಟ ಹೊಗೆ ಆವರಿಸುತ್ತಿದ್ದಂತೆ ಸ್ಥಳಕ್ಕೆ ವಿಟ್ಲ ಪೆÇಲೀಸರು, ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದರೂ ಕಟ್ಟಡದಲ್ಲಿದ್ದ ಹಲವು ಮೆಷಿನ್, ಮತ್ತು ಹಾಳೆತಟ್ಟೆಗಳು ಸುಟ್ಟು ಕರಕಲಾಗಿದೆ. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
