ಪತಿಯಿಂದ ಪತ್ನಿಯ ಬರ್ಬರ ಹತ್ಯೆ ಶಂಕೆ : ಬೇಲೂರಿನ ಪಂಪ್‍ಹೌಸ್ ರಸ್ತೆಯಲ್ಲಿ ನಡೆದ ಘಟನೆ

ಪತಿ-ಪತ್ನಿಯರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಪತಿಯೇ ಪತಿಯನ್ನು ಬರ್ಭರವಾಗಿ ಹತ್ಯೆ ಮಾಡಿದ್ದಾನೆ ಎನ್ನುವ ಘಟನೆ ಬೇಲೂರು ಪಟ್ಟಣದ ಪಂಪ್ಹೌಸ್ ರಸ್ತೆಯಲ್ಲಿ ನಡೆದಿದೆ. ಅಶ್ವಿನಿ (36) ಕೊಲೆಯಾಗಿರುವ ಮಹಿಳೆ. ಆರೋಪಿ ಪತಿ ಜಗದೀಶ್ ತಲೆಮರಿಸಿಕೊಂಡಿದ್ದಾನೆ. ಸ್ಥಳಕ್ಕೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಹರಿರಾಂಶಂಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶಾಲೆಯಿಂದ ಬಂದಂತ ಮಕ್ಕಳು ಬೀಗ ತೆಗೆದು ನೋಡಿದಾಗ ತಾಯಿ ಕೊಲೆಯಾಗಿರುವುದು ಕಂಡುಬಂದಿದೆ. ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಮಾಹಿತಿ ನೀಡಿ, ಸದ್ಯ ದೊರೆತಿರುವ ಮಾಹಿತಿ ಪ್ರಕಾರ ಗಂಡನೆ ಕೊಲೆ ಮಾಡಿದ್ದಾನೆಂದು ಹೇಳಲಾಗುತ್ತಿದೆ. ಗಂಡನ ಅಕ್ರಮ ಸಂಬಂಧದ ವಿಚಾರದಲ್ಲಿ ದಂಪತಿಗಳ ನಡುವೆ ಜಗಳ ನಡೆಯುತ್ತಿತ್ತು ಎಂಬ ಮಾಹಿತಿಯಿದೆ. ಈ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತನಿಖೆ ಆದನಂತರವೇ ವಾಸ್ತವ ತಿಳಿಯಲಿದೆ. ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು ಎಂದು ತಿಳಿಸಿದರು. ಇನ್ಸ್ಪೆಕ್ಟರ್ ಯೋಗೇಶ್, ಪಿಎಸ್‍ಐ ಎಸ್.ಜಿ.ಪಾಟೀಲ್ ಇದ್ದರು.