ವಿಟ್ಲ: ಗುರುವಂದನಾ – ಕುಟುಂಬ ಸಮ್ಮಿಲನ

ವಿಟ್ಲ: ವಿಟ್ಲ ಅಕ್ಷಯ ಸಭಾಭವನದಲ್ಲಿ ಮೂರ್ಜೆ (ಮೂರ್ಕಜೆ) ನಂದರವoಶ ಒಕ್ಕಲಿಗ ಗೌಡ ತರವಾಡು ಟ್ರಸ್ಟಿನ ವತಿಯಿಂದ ನಡೆದ ಗುರುವಂದನಾ – ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಇದೊಂದು ಔಚಿತ್ಯಪೂರ್ಣ ಕಾರ್ಯಕ್ರಮವಾಗಿದೆ. ಶ್ರದ್ದಾ ಭಕ್ತಿಯಿಂದ ಬದುಕಿದರೆ ಜೀವನಪಾವನವಾಗುತ್ತದೆ. ಗುರುವಿನ ಮಾತಿನಲ್ಲಿ ನಂಬಿಕೆ ಇಟ್ಟರೆ ಬದುಕು ಹಸನು. ಈ ಕಾರ್ಯಕ್ರಮದ ಉದ್ದೇಶ ಖಂಡಿತವಾಗಿ ಈಡೇರುತ್ತದೆ. ಶ್ರದ್ದೆ ಕಳಕೊಂಡರೆ ಸಿದ್ದಿ ಸಿಗಲು ಸಾಧ್ಯವಿಲ್ಲ. ಸಿದ್ದಿಗೆ ಶ್ರಮ ತಪಸ್ಸು ಅಗತ್ಯ. ಈ ಒಂದು ಕುಟುಂಬ ಸಮ್ಮಿಲನ ಸತ್ಯ ಒಳಿತಿನ ಮಿಲನವಾಗಲಿ ಎಂದು ಹೇಳಿದರು.

ಕಾವೂರು ಶಾಖಾಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ರವರ ಆಶೀರ್ವಚನ ನೀಡಿ ಗುರು ತೋರುವ ದಾರಿಯಲ್ಲಿ ನಡೆದರೆ ಬದುಕು ನಂದಾ ದೀಪವಾಗುತ್ತದೆ. ಗುರು ಭಲವಿದ್ದರೆ ಯಾವುದೇ ಕೆಲಸ ಯಶಸ್ವಿಯಾಗಲು ಸಾಧ್ಯ. ಧಾರ್ಮಿಕ ನಂಬಿಕೆ ಮೇಲೆ ಕುಟುಂಬಗಳು ನಿಂತಿವೆ. ತುಳುನಾಡಿನಲ್ಲಿ ತನ್ನದೇ ಆದ ವೈವಿದ್ಯವಾದ ಸಂಪ್ರದಾಯದಲ್ಲಿ ದೈವಾರಾಧನೆ ನಡೆಯುತ್ತಿದೆ. ಧರ್ಮ ಸಂಸ್ಕöÈತಿ ಉಳಿಯಲು ಹಿರಿಯರು ಹಾಕಿರುವಂತಹ ಧರ್ಮದ ಭುನಾದಿ ಕಾರಣ ಎಂದರು.

ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಮಾತನಾಡಿ ಗೌಡ ಸಮಾಜದ ಮೂರ್ಜೆ ಮನೆತನ ಐತಿಹಾಸಿಕ ಕಾರ್ಯಕ್ರಮವನ್ನು ಮಾಡಿದೆ. ಈ ಒಂದು ಒಗ್ಗಟ್ಟಿನ ಕಾರ್ಯಕ್ರಮ ಸಮಾಜದಲ್ಲಿ ಇತಿಹಾಸ ಸೃಷ್ಟಿಸಿದೆ. ಗೌಡ ಸಮಾಜ ಕೃಷಿ ಪರಂಪರೆಯ ಮೂಲಕ ಸಮಾಜಕ್ಕೆ ಅದರದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದರು.

ರಾಜ್ಯ ಒಕ್ಕಲಿಗ ಸಂಘ ಬೆಂಗಳೂರು ಇದರ ಉಪಾಧ್ಯಕ್ಷರಾದ ಡಾ.ಕೆ.ವಿ. ರೇಣುಕಾಪ್ರಸಾದ್ ಮಾತನಾಡಿ ತುಂಬ ಕುಶಿಯ ಕಾರ್ಯಕ್ರಮ ಇದಾಗಿದೆ. ಮೂಲ ಸಂಸ್ಕöÈತಿಯನ್ನು ಮರೆತ ಗೌಡ ಸಮುದಾಯದ ಬಂದುಗಳು ಹಲವರಿದ್ದಾರೆ. ಆದರೆ ಅವರೆಲ್ಲರನ್ನೂ ಒಟ್ಟು ಮಾಡುವ ಕಾರ್ಯ ಇಂತಹ ಕುಟುಂಬ ಸಮ್ಮಿಲನದಿಂದ ಸಾಧ್ಯ. ಈ ಕುಟುಂಬದ ಸಮ್ಮಿಲನ ಇತರ ಸಮುದಾಯಕ್ಕೆ ಮಾದರಿಯಾಗಿದೆ. ಕುಟುಂಬದ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಇಂತಹ ಕಾರ್ಯದಿಂದ ಸಾಧ್ಯ. ಮನುಷ್ಯರ ನಡುವೆ ಪ್ರೀತಿಯ ಬೆಸುಗೆ ಬೆಳೆಯಲು ಇಂತಹ ಕಾರ್ಯಕ್ರಮ ಅತೀ ಅಗತ್ಯ ಎಂದರು.

ಕುಟುಂಬದ ಎಲ್ಲಾ ವಿಭಾಗದ ವತಿಯಿಂದ ಗಣಪತಿ ಹವನ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುವಂದನೆ ಕಾರ್ಯಕ್ರಮ ನಡೆಯಿತು. ಮೂರ್ಜೆ ನಂದರವAಶ ಒಕ್ಕಲಿಗ ಗೌಡ ತರವಾಡು ಟ್ರಸ್ಟ್ ಅಧ್ಯಕ್ಷ ಕೆ.ಎಸ್ ಗೋಪಾಲಕೃಷ್ಣ ಗೌಡ ರವರು ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದಮೋಹನ್ ರಾಮ್, ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶ್ ಗೌಡ, ದೈವಜ್ಞರಾದ ಶಶಿಧರನ್ ಮಾಂಗಾಡು, ರಾಜೇಶ್, ಗೋಪಾಲಕೃಷ್ಣ, ಕೆ.ಎಫ್.ಡಿ.ಸಿ. ಅಧ್ಯಕ್ಷ ಎ. ವಿ. ತೀರ್ಥರಾಮ ಅಂಬೆಕಲ್ಲು, ವಿಟ್ಲ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಮೋಹನ ಗೌಡ ಕಾಯರ್‌ಮಾರ್, ವಿಟ್ಲ ಕೃಷ್ಣಯ್ಯ ಕೆ., ರವೀಂದ್ರನಾಥ ಕೇವಳ, ನಿತ್ಯಾನಂದ ಮುಂಡೋಡಿ, ಅಕ್ಷಯ ಕೆ. ಸಿ., ಮೋನಪ್ಪ ಗೌಡ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚಂದನ ಮೂರ್ಜೆ, ಜಂಟಿ ಕಾರ್ಯದರ್ಶಿ ವಸಂತ ಉಲ್ಲಾಸ್ ಬೆಳ್ಳಾರೆ, ಮಾತುಗಳನ್ನಾಡಿದರು. ಉಪಾಧ್ಯಕ್ಷ ನವೀನ ಮುರೂರು ವಂದಿಸಿದರು. ಭವ್ಯ ರಜತ್ ವಿವಿಧ ಜವಾಬ್ದಾರಿ ನಿಭಾಯಿಸಿದರು.
