ವಿಟ್ಲ: ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾದ್ರೂ ಕಾಮಗಾರಿ ನಡೆಸಿಲ್ಲ

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಗಾಂಧಿನಗರ ಮಾಳಮೂಲೆ ಸಂಪರ್ಕ ರಸ್ತೆಯಲ್ಲಿರುವ ತೋಡಿಗೆ ಸೇತುವೆಗೆ ಅನುದಾನ ಬಿಡುಗಡೆಯಾದರೂ ಇದುವರೆಗೂ ಕಾಮಗಾರಿ ನಡೆಸಿಲ್ಲ ಎಂದು ಗ್ರಾಮಸ್ಥರು ಪಂಚಾಯತ್‍ಗೆ ಭೇಟಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು.
ಇಲ್ಲಿಗೆ ಸೇತುವೆ ಮಂಜೂರಾಗಿದ್ದು, ಇದರಲ್ಲಿ ರಾಜಕೀಯ ಮಾಡಲಾಗುತ್ತಿದೆ. ಮಳೆಗಾಲದ ಮೊದಲು ಅದನ್ನು ಪೂರ್ಣ ಮಾಡಬೇಕೆಂದು ಬಂಟ್ವಾಳ ತಹಸೀಲ್ದಾರ ಡಾ. ಸ್ಮಿತಾ ರಾಮ್ ಅವರಿಗೆ ಸ್ಥಳೀಯ ಫಲಾನುಭವಿಗಳು ಮನವಿ ನೀಡಿದರು.
ಸ್ಥಳೀಯರಾದ ಅಬ್ಬೂಬ್ಬರ್ ಸಿದ್ದಿಕ್, ಉಮ್ಮರ್ ಮಾಳಮೂಲೆ, ಸಬೀರ್, ತಿಮ್ಮಪ್ಪ ನಾಯ್ಕ, ಐತ್ತಪ್ಪ ನಾಯ್ಕ, ಮೈಮೂನ ಮಾಳಮೂಲೆ, ಸುಂದರಿ, ಸಖಿನಾ, ಝುಬೈದಾ, ಶೇಕ್ ಅಲಿ ಸೇರಾಜೆ ಮತ್ತಿತರರು ಭಾಗವಹಿಸಿದ್ದರು.
