ಏನೆಕಲ್ಲು: ಮಳೆಯ ಅವಾಂತರ: ದೇವಸ್ಥಾನದ ಕಾಂಪೌಂಡ್ ಕುಸಿತ

ನಿನ್ನೆ ಸುರಿದ ಭಾರೀ ಮಳೆಗೆ ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಹರಿಯುವ ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ನೀರು ದೇವಾಲಯದ ಒಳಂಗಾಣಕ್ಕೆ ಆವರಿಸಿತ್ತು.

ನೀರಿನೊಂದಿಗೆ ಮಣ್ಣು ಹರಿದು ಬಂದು ದೇವಸ್ಥಾನದ ಒಳಾಂಗಣ ಮತ್ತು ಪರಿಸರ ಕೆಸರುಮಯವಾಗಿದೆ. ನೀರಿನಲ್ಲಿ ತೇಲಿಕೊಂಡು ಬಂದ ದೊಡ್ಡ ಗಾತ್ರದ ಮರದ ದಿಮ್ಮಿ ಹೊರಾಂಗಣದ ಕಾಂಪೌಂಡ್ ಬಳಿ ನಿಂತಿದೆ.

ಕಾಂಪೌಂಡ್ ಕುಸಿದುಬಿದ್ದು ಅಪಾರ ನಷ್ಟ ಉಂಟಾಗಿರುವುದಾಗಿ ತಿಳಿದುಬಂದಿದೆ.