ಎರ್ಮಾಳ್: ಸೂಚನಾ ಫಲಕಕ್ಕೆ ಬುಲೆಟ್ ಬೈಕ್ ಡಿಕ್ಕಿ : ಸವಾರರಿಬ್ಬರಿಗೆ ಗಂಭೀರ ಗಾಯ

ಅತೀ ವೇಗವಾಗಿ ಬಂದ ಬುಲೆಟ್ ಎರ್ಮಾಳು ಸಿಎ ಬ್ಯಾಂಕ್ ಮುಂಭಾಗ ರಸ್ತೆಯಂಚಿನ ಉಕ್ಕಿನ ಸೂಚನಾ ಫಲಕಕ್ಕೆ ಡಿಕ್ಕಿಯಾಗಿ ಬೈಕ್ ಸವಾರರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ.


ಗಾಯಗೊಂಡವರು ಮಂಡ್ಯ ಪಾಂಡವಪುರ ನಿವಾಸಿಗಳಾಗದ ನೂತನ್ (24) ಹಾಗೂ ಸಹ ಸವಾರ ಸೃಜನ್(23) ಎಂದು ತಿಳಿದು ಬಂದಿದೆ. ಇವರು ಬೆಂಗಳೂರಿನ ಬಿಡದಿಯ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ರಜೆ ನಿಮಿತ್ತ ಸಹಪಾಠಿಗಳೊಂದಿಗೆ ಒಟ್ಟು ಆರು ಮಂದಿ ಮೂರು ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನಿಂದ ಬಂದಿದ್ದರು. ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ಭಾನುವಾರ ಕಟೀಲಿಗೆ ಬಂದು ಅಲ್ಲೂ ದರ್ಶನ ಪಡೆದು ಊಟ ಸೇವಿಸಿ ಅಂತಿಮವಾಗಿ ಉಡುಪಿ ಕೃಷ್ಣ ಮಠಕ್ಕೆ ಹೊರಟಿದ್ದರು. ಎರಡು ಬೈಕ್ ಗಳಲ್ಲಿ ನಾಲ್ವರು ಮುಂದೆ ಹೋಗಿದ್ದು ಹಿಂದಿನಿಂದ ಹೋಗುತ್ತಿದ್ದ ಬುಲೆಟ್ ಎರ್ಮಾಳಿನಲ್ಲಿ ಅಪಘಾತಕ್ಕೀಢಾಗಿದೆ. ನಿದ್ಧೆಯ ಮಂಪರೋ.. ಬಿಸಿಲಿನ ಧಗೆಯೋ.. ನಿಯಂತ್ರಣ ತಪ್ಪಿದ ಬೈಕ್ ವೇಗವಾಗಿ ಮುನ್ನುಗ್ಗಿ ಉಕ್ಕಿನ ಸೂಚನಾ ಫಲಕಕ್ಕೆ ಢಿಕ್ಕಿಯಾಗಿದೆ. ಕೈ, ಕಾಲು, ಮುಖ ಭಾಗಕ್ಕೆ ಗಂಭೀರ ಹೊಡೆತ ಬಿದ್ದ ಇಬ್ಬರನ್ನೂ ಆಂಬುಲೆನ್ಸ್ ಮೂಲಕ ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.