ಉಳ್ಳಾಲ: ಚಿಣ್ಣರ ಚಿಗುರು ಮಕ್ಕಳ ಸಂತಸ ಕಲಿಕಾ ಶಿಬಿರ

ಇಂದು ಸೌಹಾರ್ದ ಕಲಾವಿದರು ಕುತ್ತಾರು ಇದರ ಆಶ್ರಯದಲ್ಲಿ ಚಿಣ್ಣರ ಚಿಗುರು ಮಕ್ಕಳ ಸಂತಸ ಕಲಿಕಾ ಶಿಬಿರವು ಉಳ್ಳಾಲದ ಕುತ್ತಾರಿನಲ್ಲಿರುವ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಕುತ್ತಾರು ಇಲ್ಲಿ ನಡೆಯಿತು.

ಈ ಶಿಬಿರವನ್ನು ಉದ್ಘಾಟಿಸಿ ಹಿರಿಯ ರಂಗಭೂಮಿ ಕಲಾವಿದರಾದ ಪ್ರಭಾಕರ್ ಕಾಫಿ ಕಾಡಿವರು ಮಾತನಾಡುತ್ತಾ, ೮೦ರ ದಶಕವನ್ನು ನಾವು ಗಮನಿಸಿದರೆ ಈಗಿನ ಸಮಾಜವು ಬಹಳಷ್ಟು ಬದಲಾಗಿದೆ. ಪ್ರಸ್ತುತ ಸಮಾಜದಲ್ಲಿ ಸೌಹಾರ್ದತೆಯನ್ನು ಕಾಣುವುದು ಮರುಭೂಮಿಯಲ್ಲಿ ನಡೆದಾಡುವ ಜನತೆಗೆ ಓಯಸಿಸ್ ಕಂಡ ತೆರನಾದ ನೆಮ್ಮದಿ ನೀಡುತ್ತದೆ ಎಂದರು.

ದ.ಕ.ಜಿ.ಪಂ ನ ಮುಖ್ಯೋಪಾಧ್ಯಾಯರಾದ ಪ್ರಮೀಳಾ ಗ್ರೇಸಿ ಡಿಸೋಜ, ಸೌಹಾರ್ದ ಕಲಾವಿದರು ಕುತ್ತಾರ್ ಇದರ ನಿರ್ದೇಶಕರಾದ ಮಿಥುನ್ ರಾಜ್ ಕುತ್ತಾರ್, ಮುನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ರಾಜೇಶ್ವರಿ ತಳೆನೀರು , ಮನೋಜ್ ವಾಮಂಜೂರು ಕಾರ್ಯದರ್ಶಿ ಸಮುದಾಯ ಕರ್ನಾಟಕ, ದೇವರಾಜ್ ಕುಲಾಲ್ ರಂಗಭೂಮಿ ಕಲಾವಿದರು, ಉಸ್ಮಾನ್ ಫಯಾಝ್ ಅಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ ದ.ಕ.ಜಿ.ಪಂ ಹಿ ಪ್ರಾ ಶಾಲೆ ಮುನ್ನೂರು, ದೈಹಿಕ ಶಿಕ್ಷಕರಾದ ಶ್ರೀಮತಿ ಶಶಿಕಲಾ ಮೊದಲಾದವರು ಉಪಸ್ಥಿತರಿದ್ದರು.