ವಿದ್ಯಾರ್ಜನೆಗೆ ಪೂರಕ ವಾತಾವರಣ ಗ್ರಾಮೀಣ ಪ್ರದೇಶ: ನಾಡೋಜ ಜಿ. ಶಂಕರ್

ಶಿಕ್ಷಣಕ್ಕೆ ಹೇಳಿ ಮಾಡಿದ ಪ್ರದೇಶ ಗ್ರಾಮೀಣ ಭಾಗ, ಉತ್ತಮ ಪರಿಸರ ಸಹಿತ ಗುಣಮಟ್ಟದ ಶಿಕ್ಷಣಕ್ಕಾಗಿ ಕಿನಾರ ಆಂಗ್ಲ ಮಾಧ್ಯಮ ಶಾಲೆಗೆ ಮಕ್ಕಳನ್ನು ಕಳುಹಿಸುವಂತೆ ನಾಡೋಜ ಜಿ. ಶಂಕರ್ ಮನವಿ ಮಾಡಿದ್ದಾರೆ.




ಅವರು ಎರ್ಮಾಳು ಕಿನಾರ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಈ ಹಿಂದೆ ಹೋಟೆಲ್ ನಲ್ಲಿ ಪಾತ್ರೆ ತೊಳೆಯುತ್ತಿದ್ದವರು ಸ್ವಂತ ಹೊಟೇಲ್ ಮಾಡಿದ ನಿದರ್ಶನಗಳು ನಮ್ಮ ಕಣ್ಣ ಮುಂದಿದೆ, ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಶಿಕ್ಷಣ ವಂಚಿತರು ಯಾವುದೇ ಮಜಲುಗಳಲ್ಲಿ ಏಳಿಗೆ ಕಾಣಲು ಸಾಧ್ಯವಿಲ್ಲ ಎಂದರು.
ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದ ಯಶ್ ಪಾಲ್ ಸುವರ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಇದೇ ಸಂದರ್ಭ ಮಾತೃ ಶಾಲಾ ಮಕ್ಕಳಿಂದ ವಿವಿಧ ನೃತ್ಯ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಅದಾನಿ ಸಂಸ್ಥೆಯ ಮುಖ್ಯಸ್ಥ ಕಿಶೋರ್ ಆಳ್ವ, ಅಶೋಕ್ ಕುಮಾರ್ ಕೊಡವೂರು, ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಡಾ.ಸುನೀಲ್ ಕುಮಾರ್, ಶಿಕ್ಷಣ ಇಲಾಖಾ ಉಪ ನಿರ್ದೇಶಕ ಗಣಪತಿ ಕೆ., ಉದ್ಯಮಿ ಶಶಿಧರ ಶೆಟ್ಟಿ ಎರ್ಮಾಳು, ಗಿರೀಶ್ ಎಸ್. ಕುಂದರ್, ತೆಂಕ ಗ್ರಾ.ಪಂ. ಅಧ್ಯಕ್ಷೆ ಕಸ್ತೂರಿ ಪ್ರವೀಣ್, ಮಾತೃ ವಿದ್ಯಾಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್, ಅಮಿತ್ ಪುತ್ರನ್, ಸುರೇಶ್ ಎಸ್.ಕುಂದರ್, ದಾಮೋದರ್ ಸುವರ್ಣ ಮುಂತಾದವರಿದ್ದರು.