ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ವಿವಿಧ ಯೋಗಾಸನದ ಭಂಗಿಗಳು
ಉಡುಪಿ : 9 ವರ್ಷಗಳ ಹಿಂದೆ ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಇಂದು ದೇಶ ವಿದೇಶದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜನ ಆಚರಿಸುತ್ತಿದ್ದಾರೆ.
ಉಡುಪಿ ಜಿಲ್ಲೆಯ ಪೇಜಾವರ ಮಠಾಧೀಶರಾದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಸ್ವತಃ ಯೋಗ ಪಟು. ತನ್ನ ದೈನಂದಿನ ಚಟುವಟಿಕೆಗಳ ನಡುವೆ ಸಮಯ ಸಿಕ್ಕಷ್ಟು ಕಾಲ ಶ್ರೀಗಳು ಯೋಗಾಭ್ಯಾಸ ಮಾಡುತ್ತಾರೆ. ತಮಿಳುನಾಡಿನ ಚೆನ್ನೈ ಪ್ರವಾಸದಲ್ಲಿರುವ ಪೇಜಾವರ ಶ್ರೀಗಳು, ಇಂದು ಬೆಳಗ್ಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಯೋಗಾಭ್ಯಾಸ ಮಾಡಿದರು.
ಮಠದಲ್ಲಿ ದೇವರ ಗರ್ಭಗುಡಿಯ ಮುಂಭಾಗ ಸ್ವಾಮೀಜಿ ವಿವಿಧ ಯೋಗಾಸನದ ಭಂಗಿಗಳನ್ನು ಪ್ರದರ್ಶನ ಮಾಡಿದರು. ಮಠದ ಶಿಷ್ಯರು ಪೇಜಾವರ ಶ್ರೀಗಳಿಗೆ ಸಾತ್ ನೀಡಿದರು. ಮಾನಸಿಕ ಮತ್ತು ಶಾರೀರಿಕ ಆರೋಗ್ಯವನ್ನು ಕಾಪಾಡಲು ಯೋಗ ಅತ್ಯವಶ್ಯಕ. ಈ ಸಂದರ್ಭದಲ್ಲಿ, ಎಲ್ಲರೂ ಸೂರ್ಯ ನಮಸ್ಕಾರ ಮಾಡುವುದನ್ನು ರೂಢಿಸಿಕೊಳ್ಳಿ ಎಂದು ಪೇಜಾವರ ಸ್ವಾಮೀಜಿ ಕರೆ ನೀಡಿದ್ದಾರೆ.