ಪಡುಬಿದ್ರಿಯಲ್ಲಿ ರೈತ ಮಿತ್ರ ನೇಜಿ ನೆಡುವ ಪ್ರಾತ್ಯಕ್ಷಿಕೆ

ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ನಡೆದ ರೈತ ಮಿತ್ರ ಮಿತ್ರ ನೇಜಿ ನೇಡುವ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಮಾಜಿ ತಾ.ಪಂ.ಸದಸ್ಯ ನವೀನ್‍ಚಂದ್ರ ಜೆ. ಶೆಟ್ಟಿ ಚಾಲನೆ ನೀಡಿದರು.ಅವರು ಈ ಸಂದರ್ಭ ಮಾತನಾಡಿ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಕೃಷಿ ಬದುಕಿನಲ್ಲಿ ಅರೋಗ್ಯ ವಂತರಾಗಿ ದೀರ್ಘ ಆಯುಷ್ಯರಾಗಿ ಬದುಕಿದವರು. ಅದರೆ, ನಾವು ಇಂದಿನ ಅಧುನಿಕ ಜೀವನ ಶ್ಯೆಲಿಯಲ್ಲಿ ಬದುಕುತ್ತಿರುವುದರಿಂದ ಮದುಮೇಹ ಮತ್ತು ಹೃದಯಾಘಾತ ದಂತಹಾ ಕಾಯಿಲೆಗಳು ಇಳಿ ವಯಸ್ಸಿನಲ್ಲಿ ಬಂದು ಬದುಕು ಬೇಗನೇ ಕೊನೆಗೊಳ್ಳುವಂತಾಗಿದೆ.

ಯುವಜನತೆ ಕೃಷಿ ಬಗ್ಗೆ ಹೆಚ್ಚಿನ ಒಲವು ತೋರಿಸಿದರೆ ನಮ್ಮ ದೇಶಕ್ಕೆ ಬೇಕಾದ ಆಹಾರವನ್ನು ನಾವೇ ತಯಾರು ಮಾಡಬಹುದು ಎಂದರು.ಪಡುಬಿದ್ರಿ ರೋಟರಿ ಅಧ್ಯಕ್ಷೆ ಗೀತಾ ಅರುಣ್ ಅಧ್ಯಕ್ಷೆತೆ ವಹಿಸಿದ್ದರು.ಯುವ ಕೃಷಿಕರಾದ ಸುಕೇಶ್ ರಾಜ್ ಬೀಡು ಹಾಗೂ ಮಹೇಂದ್ರ ಪೂಜಾರಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಿಕಟ ಪೂರ್ವ ಸಹಾಯಕ ಗವರ್ನರ್ ಗಣೇಶ್ ಅಚಾರ್ಯ ಉಚ್ಚಿಲ, ಪೂರ್ವ ಅಧ್ಯಕ್ಷರಾದ ರಮೀಜ್ ಹುಸೇನ್, ಗ್ರಾ.ಪಂ.ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ, ಕಾರ್ಯಕ್ರಮದ ನಿರ್ದೇಶಕ ರಾದ ಸುಧಾಕರ್ ಕೆ, ಹೇಮಲತಾ ಸುವರ್ಣ ಉಪಸ್ಥಿತಿರಿದ್ದರು.ರೋಟರಿ ಅಧ್ಯಕ್ಷೆ ಗೀತಾ ಅರುಣ್ ಸ್ವಾಗತಿಸಿದರು.ಪುಷ್ಪಲತಾ ಅಚಾರ್ಯ ವಂದಿಸಿದರು.ಸುಧಾಕರ್ ಕೆ ನಿರೂಪಿಸಿದರು.