ಅತಿವೃಷ್ಟಿಯಿಂದಾಗಿ ಅಡಿಕೆ ಬೆಳೆಗೆ ಉಂಟಾದ ಹಾನಿ : ಪರಿಹಾರ ನೀಡುವಂತೆ ಒತ್ತಾಯ
ಪುತ್ತೂರು : ಅತಿವೃಷ್ಠಿಯಿಂದ ಅಡಿಕೆ ಬೆಳೆಗೆ ಉಂಟಾದ ಹಾನಿಗೆ ಪರಿಹಾರ ಮತ್ತು ಕೇಂದ್ರ ಸರಕಾರ ಜಾರಿಗೆ ತಂದ ಮೂರು ಕೃಷಿ ಕಾನೂನು ರಾಜ್ಯದಲ್ಲಿ ಇನ್ನೂ ಜಾರಿಯಲ್ಲಿದ್ದು, ಅವುಗಳನ್ನು ತಕ್ಷಣವೇ ರದ್ದುಗೊಳಿಬೇಕೆಂದು ಆಗ್ರಹಿಸಿ ರೈತಸಂಘ,ಹಸಿರು ಸೇನೆಯಿಂದ ಪುತ್ತೂರು ಮಿನಿ ವಿಧಾನ ಸೌಧ ಮುಂಭಾಗದಲ್ಲಿ ಪ್ರತಿಭಟಮೆ ನಡೆಯಿತು.
ರೈತಸಂಘದ ಕಛೇರಿಯಿಂದ ಮೆರವಣಿಗೆ ಮೂಲಕ ಹೊರಟ ರೈತಸಂಘದ ಕಾರ್ಯಕರ್ತರು ಪುತ್ತೂರು ಮಿನಿ ವಿಧಾನಸೌಧದ ಮುಂದೆ ಸೇರಿ ಪ್ರತಿಭಟನೆ ನಡೆಸಿದರು. ಈ ಬಾರಿ ಸುರಿದ ಭಾರೀ ಮಳೆಗೆ ಜಿಲ್ಲೆಯಲ್ಲಿ ಸುಮಾರು 64 ಶೇಕಡಾ ಅಡಿಕೆ ಸಂಪೂರ್ಣ ನಾಶವಾಗಿದೆ. ಕೃಷಿ ಹಾನಿಗಾಗಿ ಈಗಾಗಲೇ ರಾಜ್ಯ ಸರಕಾರ 300 ಕೋಟಿ ಬಿಡುಗಡೆ ಮಾಡಿದ್ದು, ಈ ಅನುದಾನದಲ್ಲಿ ಅಡಿಕೆ ಬೆಳೆಗಾರರಿಗೆ ಸಂದ ಬೇಕಾದ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ರೈತಸಂಘದ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಒತ್ತಾಯಿಸಿದರು. ಕೇಂದ್ರ ಸರಕಾರ ಜಾರಿಗೆ ತಂದ ಮೂರು ಕೃಷಿ ಕಾನೂನನ್ನು ಈಗಾಗಲೇ ರದ್ದು ಪಡಿಸಲಾಗಿದ್ದರೂ, ರಾಜ್ಯ ಸರಕಾರ ಮಾತ್ರ ಈ ಕಾನೂನನ್ನು ಈವರೆಗೂ ರದ್ದುಗೊಳಿಸದೆ ಮೊಂಡುತನವನ್ನು ಪ್ರದರ್ಶಿಸುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು.