ಸುರತ್ಕಲ್ : ಮುಕ್ಕದಲ್ಲಿ ನಂದಿನಿ ಮೂ ಕೆಫೆ ಶುಭಾರಂಭ
ಸುರತ್ಕಲ್ ಸಮೀಪದ ಮುಕ್ಕದಲ್ಲಿ ಕೆಎಂಎಫ್ ವತಿಯಿಂದ ನೂತನವಾಗಿ ನಿರ್ಮಿಸಿದ ನಂದಿನಿ ಮೂ ಕೆಫೆ ಉದ್ಘಾಟನೆಗೊಂಡಿತ್ತು.
ಮುಕ್ಕದಲ್ಲಿ ನೂತನವಾಗಿ ನಿರ್ಮಿಸಿದ ನಂದಿನಿ ಮೂ ಕೆಫೆಯನ್ನು ಕರ್ನಾಟಕ ಹಾಲು ಮಹಾ ಮಂಡಳಿ ಇದರ ವ್ಯವಸ್ಥಾಪಕ ನಿದೇಶಕರಾದ ಬಿ.ಸಿ ಸತೀಶ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದ್ರು. ತದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಎರಡು ಕೇಂದ್ರ ಮುಕ್ಕ ಮತ್ತು ಹೊಸಬೆಟ್ಟಿನಲ್ಲಿ ಆರಂಭಿಸಿದ್ದೇವೆ. ಮಂಗಳೂರಿನ ಕೆಎಂಫೆ ಒಕ್ಕೂಟ ವಿಶಿಷ್ಟವಾಗಿದ್ದು, ಪ್ರತಿ ದಿನ 5 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಇಲ್ಲಿ ಉತ್ಪಾದಿಸುವ ಹಾಲು ರಾಜ್ಯದಲ್ಲಿಯೇ ಅತೀ ಹೆಚ್ಚು ಕೊಬ್ಬು, ಪೌಷ್ಟಿಕಾಂಶ ಇರುವ ಹಾಲು ಆಗಿ ಗುರುತಿಸಲ್ಪಟ್ಟಿದೆ. ಇಲ್ಲಿ ರಾಗಿ ಮಾಲ್ಟ್, ನೀರು ಮಜ್ಜಿಗೆ ಇತ್ಯಾದಿ ಹೊಸ ಉತ್ಪನ್ನ ಪರಿಚಯಿಸಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಡಾ| ವೈ.ಭರತ್ ಶೆಟ್ಟಿ ಅವರು ದೀಪ ಬೆಳಗಿಸಿ, ಉದ್ಘಾಟಿಸಿದರು. ತದಬಳಿಕ ಮಾತನಾಡಿದ ಅವರು ಹೊಸ ಆವಿಷ್ಕಾರದ ಮೂಲಕ ಗ್ರಾಹಕರನ್ನು ತಲುಪಲು ಕೆಎಂಎಫ್ ಸಾಹಸ ಶ್ಲಾಘನೀಯ.ಇದಕ್ಕೆ ಗಾಹಕರ ಪ್ರೋತ್ಸಾಹ ಅಗತ್ಯವಿದೆ ಎಂದು ಅವರು ಹೇಳಿದರು. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಮಾತನಾಡಿ, ನಮ್ಮ ಒಕ್ಕೂಟ ರೈತರ ಸಂಸ್ಥೆ ಪ್ರತಿ ವಹಿವಾಟಿನಲ್ಲಿ 80 ಪೈಸೆ ನೇರವಾಗಿ ರೈತರಿಗೆ ಸೇರುತ್ತದೆ. ಆ್ಯಪಲ್ ಮಿಲ್ಕ್ ಶೇಕ್ ಇತ್ಯಾದಿ ಪರಿಚಯಿಸುವ ಉದ್ದೇಶ ಸಂಸ್ಥೆಗೆ ಇದೆ ಎಂದು ಅವರು ಹೇಳಿದರು. ಇದೇ ವೇಳೆ ಕೆಎಂಎಫ್ ನಿರ್ದೇಶಕ ಕಾಪು ದಿವಾಕರ್ ಶೆಟ್ಟಿ ಅವರು ಕೆಎಂಎಫ್‍ನ ಶೆಫ್ ಶಿವಕುಮಾರ್ ಅವರನ್ನು ಗೌರವಿಸಿದರು. ಈ ವೇಳೆ ಪಾಲಿಕೆ ಸದಸ್ಯರಾದ ಶೋಭಾ ರಾಜೇಶ್, ಶ್ವೇತಾ, ವರುಣ್ ಚೌಟ, ಕೆಎಂಎಫ್ ಉಪಾಧ್ಯಕ್ಷ ಜಯರಾಮ ರೈ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮ್ಯಾನೇಜಿಂಗ್ ಡೈರೆಕ್ಟರ್ ಡಿ.ಅಶೋಕ್. ಕೆಂಎಂಎಫ್ ಮಾರುಕಟ್ಟೆ ನಿರ್ದೇಶಕರಾದ ರಘುನಂದನ್, ಕೆಎಂಎಫ್‍ನ ಎಂ.ಎಸ್. ಸತೀಶ್ ಕುಮಾರ್, ಚಿತ್ರನಟ ಪ್ರಸನ್ನ ಶೆಟ್ಟಿ ಬೈಲೂರು, ಮಾರುಕಟ್ಟೆ ವಿಭಾಗದ ಅಧಿಕಾರಿಗಳಾದ ಸಚಿನ್ ಸಿ, ರವಿ ಎಂ., ಜಾನಟ್ ರೊಸಾರಿಯೋ, ಗೋಪಾಲಕೃಷ್ಣ ರಾವ್, ಅಭಿಷೇಕ್ ಹೆಗ್ಡೆ ,ಫ್ರಾಂಚೆಸಿ ಮಾಲಕರಾದ ಶಶಿಕಾಂತ್ ಸೇರಿದಂತೆ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರು ಈ ವೇಳೆ ಉಪಸ್ಥಿತರಿದ್ದು,
ಇಲ್ಲಿ ನಂದಿನಿಯ ಗುಡ್ ಲೈಫ್, ಹಾಲಿನ ಪೇಡ,ನಂದಿನಿ ಮೈಸೂರು ಪಾಕ್, ತೃಪ್ತಿ, ಕ್ಯಾಷ್ಯು ಬರ್ಫಿ, ಗೋಡಂಬಿ ಶಕ್ತಿ, ನಂದಿನಿ ಕುಕೀಸ್, ನಂದಿನಿ ಕೋಡುಬಳೆ, ಬಾಂಬೆ ಮಿಕ್ಸ್ಚರ್, ತುಪ್ಪ, ಬಾದಮಿ ಸುವಾಸಿತ ಹಾಲು, ನಂದಿನಿ ಹಾಲಿನ ಪೌಡರ್, ಬೆಳಗಾವಿ ಕುಂದಾ, ಬಾದಮ್ ಹಾಲಿನ ಪುಡಿ, ನಂದಿನಿ ಶಾವಿಗೆ ಪಾಯಸ, ರಸಗುಲ್ಲಾ, ಖೋವಾ ಜಾಮೂನ್ ಸೇರಿದಂತೆ ಜೊತೆಗೆ ಹಾಲಿ ಫಿಝಾ ಬರ್ಗರ್, ಹಾಲಿನ ಜ್ಯೂಸ್, ನಂದಿನಿ ಐಸ್‍ಕ್ರಿಂಗಳು ಇಲ್ಲಿ ಲಭ್ಯವಿದೆ.