ಅರಿಯಡ್ಕದ ಮಡ್ಯಂಗಳದಲ್ಲಿ ಕುಸಿದು ಬಿದ್ದ ಮನೆ: ಸ್ಥಳಕ್ಕೆ ಅಶೋಕ್ ಕುಮಾರ್ ರೈ ಭೇಟಿ, ಪರಿಶೀಲನೆ

ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಮಡ್ಯಂಗಳ ನಿವಾಸಿ ಬಾಬು ರೈ ಯವರು ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದು, ವೀಪರೀತ ಮಳೆಯಿಂದ 15 ದಿನಗಳ ಹಿಂದೆ ಮನೆಯು ಪೂರ್ತಿ ಕುಸಿದಿದ್ದು ವಾಸಿಸಲು ಮನೆ ಇಲ್ಲದಂತಾಗಿದೆ.

ಇವರಿಗೆ ಸರಕಾರದಿಂದ ಇದುವರೆಗೂ ಯಾವುದೇ ಪರಿಹಾರವೂ ಸಿಕ್ಕಿರುವಿದಿಲ್ಲ , ಇವರ ಈ ಪರಿಸ್ಥಿತಿ ಕಂಡು ಅಶೋಕ್ ರೈ ಸೇವಾ ಟ್ರಸ್ಟ್ ಕೌಡಿಚ್ಚಾರ್ ಘಟಕದ ಅಭಿಮಾನಿ ಬಳಗದವರು ಉದ್ಯಮಿ , ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಯವರ ಗಮನಕ್ಕೆ ತಂದಾಗ , ಕೂಡಲೇ ಸ್ಪಂದಿಸಿದ ಅಶೋಕ್ ಕುಮಾರ್ ರೈ ಯವರು ಖುದ್ದು ಭೇಟಿ ನೀಡಿ ಅವರ ಪರಿಸ್ಥಿತಿ ವೀಕ್ಷಿಸಿದರು. ಇವರ ಈ ಬಡಕುಟುಂಬದ ಕಷ್ಟವನ್ನು ನೋಡಿ ವಾಸಿಸಲು ಮನೆ ನಿರ್ಮಿಸಿಕೊಡುವ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಭುಜಂಗ ರೈ ಮಡ್ಯಂಗಳ ಪ್ರಕಾಶ ರೈ ಕೊಯಿಲ , ಜನಾರ್ದನ ಬಳ್ಳಿಕಾನ, ಗುಗನೇಶ್ವರ ಕೌಡ್ಡಿಚಾರ್ ಸಿಆರ್ ಸಿ ಕಾಲೋನಿ , ಅಮೃತ್ ರೈ , ರಿತೇಶ್ ಕುಮಾರ್ ರೈ ಮಡ್ಯಂಗಳ ಮತ್ತು ಪ್ರೇಮಲತ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.