ಉಡುಪಿಯಲ್ಲಿ ಕೃಷಿಯತ್ತ ಮುಖಮಾಡಿದ ಯುವ ಜನಾಂಗ
ಯುವ ಜನಾಂಗ ಮತ್ತೆ ಕೃಷಿಯತ್ತ ಮುಖ ಮಾಡಿದೆ ಅನ್ನೋದಕ್ಕೆ ಈ ಸ್ಟೋರಿಯೇ ಸಾಕ್ಷಿ ಹಡಿಲು ಬಿದ್ದಿರುವ ಭೂಮಿಯನ್ನು ಮತ್ತೆ ಹಸನಾಗಿಸಲು ಇಲ್ಲೊಂದು ಯುವಕರ ಗುಂಪು ಮುಂದಾಗಿದೆ. ಹೀಗೆ..ಭತ್ತದ ಪೈರು ಹಿಡ್ಕೊಂಡು ಗದ್ದೆಗಿಳಿದ ಯುವಕರು, ಉಡುಪಿಯ ಮೂಡುಪೆರಂಪಳ್ಳಿ ಶೀಂಭ್ರಾ ಎಂಬಲ್ಲಿನ ಯುವಕರು.ತನ್ನೂರಲ್ಲಿ ಬೇಸಾಯನೇ ಮಾಡದೇ ಹಡಿಲು ಬಿದ್ದಿದ್ದ ಭೂಮಿಯನ್ನ ಕೃಷಿ ಮಾಡಲು ಮುಂದಾಗಿರುವ ವಿದ್ಯಾವಂತ ಯುವಕರು.
ಮೂಡು ಪೆರಂಪಳ್ಳಿಯ ಹಲವು ಎಕ್ರೆ ಕೃಷಿ ಭೂಮಿ ಬೇಸಾಯನೇ ಮಾಡದೇ ಹಡಿಲು ಬಿದ್ದಿತ್ತು .ಹೀಗಾಗಿ ಸ್ಥಳೀಯ ಯುವಕರು ಬೇಸಾಯದತ್ತ ಮುಖಮಾಡಿದ್ದಾರೆ.ಕೃಷಿ ಬಗ್ಗೆ ಅಷ್ಟೊಂದು ಅನುಭವ ಇಲ್ಲದಿದ್ರೂ..ಅದನ್ನ ಕಲಿತುಕೊಂಡು ತಮ್ಮ ಗೆಳೆಯರೊಂದಿಗೆ ಸೇರಿ ಗದ್ದೆ ಹಸನು ಮಾಡಿ ಭತ್ತದ ಪೈರುಗಳನ್ನು ನೆಟ್ಟು ಬೆಳೆ ತೆಗೆಯಲು ಮುಂದಾಗಿದ್ದಾರೆ.
ಇಲ್ಲಿ ಒಬ್ಬೊಬ್ಬರದ್ದು ಒಂದೊಂದು ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ರೆ ,ಇನ್ನೂ ಕೆಲವರು ವಿದ್ಯಾರ್ಥಿಗಳು.ರಜಾ ದಿನಗಳಲ್ಲಿ ಇದೇ ಹಡಿಲು ಭೂಮಿಯಲ್ಲಿ ಕ್ರಿಕೆಟ್,ಫುಡ್ ಬಾಲ್ ಗಳನ್ನು ಅಡುತ್ತಿದ್ದರು.ಕಳೆದ ಲಾಕ್ ಡೌನ್ ನಲ್ಲಿ ಇದೇ ಹಡಿಲು ಭೂಮಿಯಲ್ಲಿ ಬೇಸಾಯ ಯಾಕೆ ಮಾಡಬಾರದು ಎನ್ನುವ ಯೋಚನೆ ಹೊಳೆದಿತ್ತು.ಹೀಗಾಗಿ ಸುಮಾರು 6 ಎಕ್ರೆಗೂ ಹೆಚ್ಚು ಭೂಮಿಯಲ್ಲಿ ಈ ಯುವಕರ ತಂಡ ಭತ್ತದ ಬೆಳೆ ಬೆಳೆದಿದ್ರು.ಯುವಕರ ಕೃಷಿ ಕ್ರಾಂತಿ ಬಗ್ಗೆ ತಿಳಿದ ಊರಿನ ಮತ್ತಷ್ಟು ಯುವಕರು ಈ ಇವರ ಜೊತೆ ಕೈ ಜೋಡಿಸಿದ್ದಾರೆ.ಖುಷಿ ಖುಷಿಯಾಗಿ ಕೆಸರು ಗದ್ದೆಗಿಳಿದು ಬೇಸಾಯದಲ್ಲಿ ತೊಡಗಿಕೊಂಡಿದ್ದಾರೆ.
ಇನ್ನು ಕೃಷಿ ಬಗ್ಗೆ ಗೊತ್ತಿದ್ದ ಯುವಕರು ಕೂಡ ,ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಈ ಯುವಕರ ತಂಡವನ್ನು ಸೇರಿಕೊಂಡಿದ್ದಾರೆ.ದಿನೇ ದಿನೇ ಕೃಷಿಯಲ್ಲಿ ಅಸಕ್ತಿ ಹೊಂದಿರುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ.ಒಟ್ಟಿನಲ್ಲಿ ಕರಾವಳಿ ಯಲ್ಲಿ ಹೊಸದೊಂದು ಕೃಷಿ ಕ್ರಾಂತಿಗೆ ಈ ಯುವಕರು ಹೆಜ್ಜೆ ಇಟ್ಟಿದ್ದಾರೆ.ಯುವ ಜನಾಂಗ ಕೃಷಿಯತ್ತ ಮುಖ ಮಾಡಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ.ಇದೇ ರೀತಿ ತುಳುನಾಡಿನ ಪ್ರತಿ ಗ್ರಾಮದಲ್ಲೂ ಯುವ ಜನಾಂಗ ಕೃಷಿಯತ್ತ ಅಸಕ್ತಿ ಬೆಳಸಿದ್ದಲ್ಲಿ ,ತುಳುನಾಡು ಮತ್ತೆ ಕೃಷಿಕ್ರಾಂತಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.