ಕಾರ್ಕಳದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಮಕ್ಕಳ ರಕ್ಷಣೆ
ಕಾರ್ಕಳ ಗ್ರಾಮೀಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಯಿ ಇಲ್ಲದೆ ತಬ್ಬಲಿಯಾದ ಅಸಹಾಯಕ ತಂದೆಯೊಂದಿಗಿದ್ದ 4 ಮಕ್ಕಳ ರಕ್ಷಿಸಿ ಪುನರ್ವಸತಿ ಕೇಂದ್ರದಲ್ಲಿ ಮಕ್ಕಳ ರಕ್ಷಣಾ ಘಟಕ ವ್ಯವಸ್ಥೆಯನ್ನು ಕಲ್ಪಿಸಿದ್ದರು.
ನಿಟ್ಟೆ ಗ್ರಾಮ ಪಂಚಾಯತ್ ಪರಿಸರದಲ್ಲಿ ಅಸಾಹಯಕ ಪರಿಸ್ಥಿಯಲ್ಲಿದ್ದ ಮಕ್ಕಳ ತಂದೆ ಹಾಗೂ 3 ಗಂಡು ಮಕ್ಕಳು 1 ಹೆಣ್ಣು ಮಗು ಸೇರಿ 4 ಮಕ್ಕಳನ್ನು ರಕ್ಷಿಸಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕಾರ್ಕಳದ ಸಮಾಜ ಸೇವಕಿ ರಮಿತಾ ಶೈಲೇಂದ್ರ ರವರು ದೂರವಾಣಿ ಮೂಲಕ ತಿಳಿಸಿದ್ದರು. ತಕ್ಷಣ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತಾಯಿ ಇಲ್ಲದ ಮಕ್ಕಳ ರಕ್ಷಿಸಲು ಮುಂದಾದರು. 4 ಮಕ್ಕಳ ತಂದೆಯ ಅನಾರೋಗ್ಯ, ಮಕ್ಕಳ ಸ್ಥಿತಿ ನೋಡಿ ತಕ್ಷಣ ಇಲಾಖೆ 4 ಮಕ್ಕಳಿಗೆ ಪುನರ್ವಸತಿ ಕಲ್ಪಿಸಿತು ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ನಾಯ್ಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ರಕ್ಷಣಾಧಿಕಾರಿ ಮಹೇಶ್ ದೇವಾಡಿಗ, ಕಾರ್ಕಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್ .ಕಾರ್ಕಳ ಗ್ರಾಮಾಂತರ ಠಾಣಾ ಉಪ ನಿರೀಕ್ಷಕರಾದ ತೇಜಸ್ವಿ, ಭಾಗವಹಿಸಿದ್ದರು.