ಕೃಷಿ ಮಸೂದೆ ಹಿಂಪಡೆದ ಕೇಂದ್ರ ಸರ್ಕಾರ : ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ
ಕೇಂದ್ರ ಸರಕಾರ ಮೂರು ಕೃಷಿ ಕಾಯಿದೆ ಹಿಂಪಡೆದ ಪರಿಣಾಮ ಬೆಳ್ತಂಗಡಿಯಲ್ಲಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬೆಳ್ತಂಗಡಿ ಮಾಜಿ ಶಾಸಕರಾದ ವಸಂತ ಬಂಗೇರಾ ಮಾತನಾಡಿ ಕೇಂದ್ರ ಸರಕಾರ ಮೂರು ಕೃಷಿ ಮಸೂದೆಗಳನ್ನು ವಾಪಸ್ ಪಡೆದು ಕೊಂಡಿದೆ ಈ ದೇಶದ ರೈತರ ಒಗ್ಗಟ್ಟಿನ ಹೋರಾಟ ಇದಕ್ಕೆ ಕಾರಣ,ಒಂದು ವರ್ಷದಿಂದ ಹೋರಾಟ ಮಾಡುತಿದ್ದ ರೈತರು ಈ ಹಂತಕ್ಕೆ ತಲುಪುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದವರು ಮಸೂದೆ ವಾಪಸ್ ಪಡೆದಿದ್ದಾರೆ, ನಾವು ಈ ವಿಚಾರವಾಗಿ ಬೆಳ್ತಂಗಡಿಯಲ್ಲಿ ವಿಜಯೋತ್ಸವ ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು. ನಂತರ ಮಾತನಾಡಿದ ಕಾರ್ಮಿಕ ಮುಖಂಡ ಬಿ.ಎಂ. ಭಟ್ ಮಾತನಾಡಿ ದೇಶದ ಇತಿಹಾಸದಲ್ಲಿ ಭಾರತೀಯರು ಅತ್ಯಂತ ಸಂತೋಷ ಪಡುವ ದಿನ,ಸರ್ವಾಧಿಕಾರ ಆಗಿ ತಾನು ಏನೂ ಮಾಡಿದರೂ ನಡೆಯುತ್ತದೆ ಎಂಬ ದೃಷ್ಟಿಯಿಂದ ಕೃಷಿ ಮಸೂದೆಗಳನ್ನು ಜಾರಿ ಮಾಡಿದಂಥ ಕೇಂದ್ರದ ನರೇಂದ್ರ ಮೋದಿ ಸರಕಾರಕ್ಕೆ ದೊಡ್ಡ ರೀತಿಯ ಆಘಾತ ತಂದಿದೆ ಚುನಾವಣೆ ಸೋಲು ಅವರನ್ನು ಭೀತಿ ಬರುವ ಹಾಗೆ ಮಾಡಿದೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ರಂಜನ್ ಗೌಡ,ಅಭಿನಂದನ್ ಹಾಗೂ ಇತರರು ಉಪಸ್ಥಿತರಿದ್ದರು.